ಮುದ್ದೇಬಿಹಾಳ:ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸೆಸ್ ಸಂಗ್ರಹದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಗುರು ತಾರನಾಳ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಿಕೋಟಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾಗಿ ತಮ್ಮ 40 ತಿಂಗಳ ಅವಧಿಯಲ್ಲಿ ₹ 9.75 ಕೋಟಿ ಸೆಸ್ ಸಂಗ್ರಹವಾಗಿದೆ. ಅದರಲ್ಲಿ ₹ 4.50 ಕೋಟಿಯನ್ನು ತಾಳಿಕೋಟಿ, ಮುದ್ದೇಬಿಹಾಳದಲ್ಲಿ ರೈತಭವನ ನಿರ್ಮಿಸಲಾಗಿದೆ ಎಂದರು.