ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ‌ ಮತ್ತೆ ಭೂಕಂಪನ: ಭಾರೀ ಶಬ್ದಕ್ಕೆ ಮನೆಯಿಂದ ಹೊರ ಓಡಿ ಬಂದ ಜನ

ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 10-45 ಸುಮಾರಿಗೆ ಮತ್ತೆ ಭೂಕಂಪನವಾಗಿದೆ. ಭಾರೀ ಶಬ್ದ ಕೇಳಿ ಜನರು ಕೆಲಕಾಲ ಆತಂಕಗೊಂಡಿದ್ದರು.

Earthquake
ಭೂಕಂಪನ

By

Published : Apr 21, 2023, 6:57 AM IST

ವಿಜಯಪುರ:ನಗರದಲ್ಲಿ ಮತ್ತೊಮ್ಮೆ ನಿನ್ನೆ ರಾತ್ರಿ (ಗುರುವಾರ) 10.45ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಹಲವು ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಕಳೆದ ಹಲವು ತಿಂಗಳ ಹಿಂದೆ ಹಲವು ಬಾರಿ ಭೂಕಂಪನವಾಗಿದ್ದರೂ ಈ ರೀತಿಯ ಶಬ್ದ ಬಂದಿರಲಿಲ್ಲ. ಆದ್ರೆ ಈ ಬಾರಿಗೆ ಶಬ್ದ ಕೇಳಿಸಿದ್ದು, ಜನರು ಕೆಲಕಾಲ ಆತಂಕಕ್ಕೀಡಾಗಿದ್ದರು.

ಇದನ್ನೂ ಓದಿ :ಅಂಡಮಾನ್​ ಮತ್ತು ನಿಕೋಬಾರ್​ದಲ್ಲಿ ಭೂಕಂಪ.. 13 ಗಂಟೆ ಅವಧಿಯಲ್ಲಿ 6 ಬಾರಿ ಕಂಪಿಸಿದ ಭೂಮಿ!

ಭೂಕಂಪನವಾಗಿರುವ ಬಗ್ಗೆ ಭೂಕಂಪನ ಕೇಂದ್ರದಿಂದ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎರಡು ಬಾರಿ ಭೂ ಕಂಪನದ ಅನುಭವ ಜನರಿಗೆ ಆಗಿದೆ. ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವಾಗುತ್ತಲೇ ಇದೆ. ಈ ಕುರಿತು ಜಿಲ್ಲಾಡಳಿತದ ಮನವಿಗೆ ಭೂಕಂಪನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದರು.

ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯವಿರುವ ಕಾರಣ ಭೂಕಂಪನವಾಗುವುದು ಸಹಜ, ಇದಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲವೆಂದು ಭರವಸೆ ನೀಡಿದ್ದರು. ಆದರೂ ಸಹ ಭೂಕಂಪನದ ಶಬ್ದ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ ಸಹ ಸಂಜೆ ಮಳೆ ಸುರಿದ ಬಳಿಕ ವಿಜಯಪುರ ನಗರದ ಹಲವು ಕಡೆ ಭೂಕಂಪನ ಅನುಭವನ್ನು ಸಾರ್ವಜನಿಕರು ಅನುಭವಿಸಿದ್ದಾರೆ.

ಇದನ್ನೂ ಓದಿ :ಹೊಸಪೇಟೆ ಬಳಿಯ ಗ್ರಾಮದಲ್ಲಿ ನಡುಗಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲು

ಇತ್ತೀಚೆಗೆ ಏಪ್ರಿಲ್​ 4 ರಂದು ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ವಿವಿಧೆಡೆ ಭೂಕಂಪನದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 2.6 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿತ್ತು. ಅಂದು ಕೂಡ ರಾತ್ರಿ 10.41ರ ಸಮಯದಲ್ಲಿ ಭೂಮಿ ಕಂಪಿಸಿತ್ತು.

ಇದನ್ನೂ ಓದಿ :ಫಿಜಿಯಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ ಶೇ.6ರಷ್ಟು ತೀವ್ರತೆ ದಾಖಲು

ABOUT THE AUTHOR

...view details