ಮಿಡತೆಗಳು ಬರುವ 24 ಗಂಟೆಗಳ ಮುಂಚೆಯೇ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ: ಡಿಸಿ ಸ್ಪಷ್ಟನೆ - ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ
ಮಿಡತೆಗಳು ಪಕ್ಕದ ಯಾವುದೇ ಜಿಲ್ಲೆಗಳಿಗೆ ಬಂದರೂ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ, ಹೀಗಾಗಿ ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
ವಿಜಯಪುರ:ಮಿಡತೆಗಳು ಜಿಲ್ಲೆಯಲ್ಲಿ ದಾಳಿ ಇಡುವ 24 ಗಂಟೆಗಳ ಮುಂಚೆ ಮಾಹಿತಿ ದೊರೆಯುತ್ತಿದೆ. ಅವುಗಳ ಹಾವಳಿ ತಪ್ಪಿಸಲು ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದರು.
ಈಗಾಗಲೇ ಕೃಷಿ ಸಚಿವರು ಕೂಡಾ ಅಧಕಾರಿಗಳೊಂದಿಗೆ ಡಿಸಿ ಸಭೆ ನಡೆಸಿದ್ದಾರೆ. ಅವ್ರು ಕೂಡ ಇನ್ನಷ್ಟು ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಾಗಿ ದ್ರಾಕ್ಷಿ ಮತ್ತು ನಿಂಬೆ ತೋಟಗಾರಿಕೆ ಬೆಳೆಗಳಿವೆ. ಹಾಗೂ ರೈತರ ಬಳಿ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಟ್ಯಾಂಕರ್ ಮತ್ತು ಸ್ಪ್ರೇಯರ್‌ಗಳಿವೆ ಎಂದರು.
ಮಿಡತೆಗಳು ಪಕ್ಕದ ಯಾವುದೇ ಜಿಲ್ಲೆಗಳಿಗೆ ಬಂದರೂ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ, ಹೀಗಾಗಿ ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.