ಕರ್ನಾಟಕ

karnataka

ETV Bharat / state

ವಿಜಯಪುರ: ಉದ್ದೇಶಿತ ವಿಮಾನ ನಿಲ್ದಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ - ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾರ್ಯ

ವಿಜಯಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನಿಯೋಜಿತ ವಿಮಾನ ನಿಲ್ದಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

dc
dc

By

Published : Sep 19, 2020, 5:48 PM IST

ವಿಜಯಪುರ:ಜಿಲ್ಲೆಯ ಬುರಾಣಪುರ-ಮಧಬಾವಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣ ಸ್ಥಾಪನೆಗಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ಟರ್ಮಿನಲ್, ರನ್‍ವೇ, ಪಾರ್ಕಿಂಗ್, ಉದ್ಯಾನವನ ಅಭಿವೃದ್ಧಿ ಸೇರಿದಂತೆ ನಿಲ್ದಾಣಕ್ಕೆ ಸಂಪರ್ಕಿಸಲು ಅವಶ್ಯಕತೆ ಇರುವ ಅಪ್ರೋಚ್ ರೋಡ್, ಜಲಸಂಪನ್ಮೂಲ ಅವಶ್ಯಕತೆಗಳ ಕುರಿತು ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಿಯೋಜಿತ ವಿಮಾನ ನಿಲ್ದಾಣ ಸ್ಥಳಕ್ಕೆ ಡಿಸಿ ಭೇಟಿ

ವಿಮಾನ ನಿಲ್ದಾಣಕ್ಕಾಗಿ ಅಪ್ರೋಚ್ ರೋಡ್ ಕಲ್ಪಿಸಲು ಅವಶ್ಯಕತೆ ಇರುವ ಹೆಚ್ಚುವರಿ ಜಮೀನಿಗೆ ಸಂಬಂಧಪಟ್ಟಂತೆ ಸೂಕ್ತ ಗಮನ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣಕ್ಕೆ ತ್ವರಿತ ಸಂಪರ್ಕಿಸುವ ಕಾಲುವೆ ಪಕ್ಕದ ಜಾಗವನ್ನು ರಸ್ತೆಗೆ ಬಳಸುವ ಕುರಿತು ಪರಿಶೀಲನೆ ನಡೆಸಿದರು.

ನಿಯೋಜಿತ ವಿಮಾನ ನಿಲ್ದಾಣ ಸ್ಥಳಕ್ಕೆ ಡಿಸಿ ಭೇಟಿ

ವಿಮಾನ ನಿಲ್ದಾಣಕ್ಕೆ ಅವಶ್ಯಕ ಸಹಾಯ ಸಹಕಾರವನ್ನು ಆದ್ಯತೆ ಮೇಲೆ ಒದಗಿಸುವುದಾಗಿ ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದ ಡಿಸಿ ಸುನೀಲ ಕುಮಾರ ವಿಮಾನ ನಿಲ್ದಾಣಕ್ಕಾಗಿ ಅತ್ಯುತ್ತಮ ಪ್ರದೇಶ ಇದಾಗಿದ್ದು, ಅತ್ಯಂತ ಸುಂದರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ವಿ.ಬಿ ಪಾಟೀಲ, ವಿಮಾನ ನಿಲ್ದಾಣ 2 ಹಂತದಲ್ಲಿ ಅಭಿವೃದ್ದಿ ಪಡಿಸಲಾಗು ತ್ತಿದ್ದು, ಆರಂಭಿಕವಾಗಿ ಮತ್ತು ಪ್ರಥಮ ಹಂತದ ಕಾಮಗಾರಿ ಕೈಗೊಳ್ಳುವ ಕುರಿತು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಐಸೋಲೇಷನ್ ಬೆ, ಟರ್ಮಿನಲ್, ರನ್ ವೇ, ಲೇವಲಿಂಗ್, ಪೆರಿಫೇರಲ್ ರಸ್ತೆ ನಿರ್ಮಾಣ, ಅಗತ್ಯ ವಿರುವ ಅಫ್ರೋಚ್ ರಸ್ತೆ ಮತ್ತು ಜಲಸಂಪನ್ಮೂಲದ ಅವಶ್ಯಕತೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ABOUT THE AUTHOR

...view details