ವಿಜಯಪುರ:ಕಳೆದ ರಾತ್ರಿ ಊರಿಗೆ ಬಂದಿದ್ದ ಮೊಸಳೆಯನ್ನು ಸೆರೆ ಹಿಡಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಸ್ಯಾಳ ಗ್ರಾಮದ ಬಳಿ ನಡೆದಿದೆ.
ರಾತ್ರೋರಾತ್ರಿ ಊರಿಗೆ ಬಂದ ಮೊಸಳೆ... ಬೆಚ್ಚಿಬಿದ್ದ ಗ್ರಾಮಸ್ಥರು - ಮೊಸಳೆಗೆ ಹೆದರಿದ ಜನ
ವಿಜಯಪುರ ಜಿಲ್ಲೆಯ ಕಿರಿಸ್ಯಾಳ ಗ್ರಾಮದ ಹೊಲದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾದ ಘಟನೆ ನಡೆದಿದೆ.
ಮೊಸಳೆ ಸೆರೆ
ಕೆರೆ ಪಕ್ಕದ ಕಿರಿಸ್ಯಾಳ ಗ್ರಾಮದ ಸಮೀಪದ ಹೊಲವೊಂದರಲ್ಲಿ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ನಂತರ ಸ್ಥಳೀಯ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಮುದ್ದೇಬಿಹಾಳ ಅರಣ್ಯಾಧಿಕಾರಿಗಳು ಸ್ಥಳೀಯರ ಸಹಾಯದೊಂದಿಗೆ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.