ವಿಜಯಪುರ: ಕೋವಿಡ್ ನಿಯಮ ಉಲ್ಲಂಘಿಸಿ ಇಲ್ಲಿನ ಕಲ್ಲಿನಾಥ ಸ್ವಾಮೀಜಿ ಪಲ್ಲಕ್ಕಿ ಮೆರವಣಿಗೆ ನಡೆಸಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ದಿಗಂಬರೇಶ್ವರ ಮಠದಲ್ಲಿ ನಡೆದಿದೆ.
ಕೋವಿಡ್ ನಿಯಮ ಗಾಳಿಗೆ ತೂರಿ ಪಲ್ಲಕ್ಕಿ ಮೆರವಣಿಗೆ! - vijayapura news
ಪ್ರತಿ ದವನದ ಹುಣ್ಣಿಮೆಗೆ ಜರಗುವ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಜಾತ್ರೋತ್ಸವ ಹಿನ್ನೆಲೆ ಬುಧವಾರ ಕಲ್ಲಿನಾಥ ಸ್ವಾಮೀಜಿ ಪಟ್ಟಣದಲ್ಲಿ ಭಕ್ತರನ್ನು ಕರೆದುಕೊಂಡು ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ.
ಪ್ರತಿ ದವನದ ಹುಣ್ಣಿಮೆಗೆ ಜರಗುವ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಜಾತ್ರೋತ್ಸವ ಹಿನ್ನೆಲೆ ಬುಧವಾರ ಕಲ್ಲಿನಾಥ ಸ್ವಾಮೀಜಿ ಪಟ್ಟಣದಲ್ಲಿ ಭಕ್ತರನ್ನು ಕರೆದುಕೊಂಡು ನಿಯಮ ಉಲ್ಲಂಘಿಸಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ.
ತಹಶೀಲ್ದಾರ್ ಹಾಗೂ ಪೊಲೀಸರು ಜಾತ್ರೆ ನಡೆಸದಂತೆ ತಿಳಿ ಹೇಳಿದರೂ ನಿಯಮ ಮೀರಿ ಸ್ವಾಮೀಜಿಯಿಂದ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಕಲ್ಲಿನಾಥ ಸ್ವಾಮೀಜಿಯಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸ್ವತಃ ಕೂತು ಭಕ್ತರಿಂದ ಮೆರವಣಿಗೆ ಮಾಡಿಸಿಕೊಂಡಿದ್ದಾರೆ. ಸರ್ಕಾರದ ನಿಯಮ ಅರಿತಿದ್ದ ಬಹುತೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದ್ದ ಬೆರಳಣಿಕೆ ಭಕ್ತರು ಮುಖಕ್ಕೆ ಮಾಸ್ಕ್ ಇಲ್ಲದೇ ಯಾವುದೇ ಕೊರೊನಾ ನಿಯಮ ಇಲ್ಲದೆ ಪಲ್ಲಕ್ಕಿ ಮರೆವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.