ಕರ್ನಾಟಕ

karnataka

ETV Bharat / state

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ- ವಿಡಿಯೋ - ವಿಜಯಪುರ

ವಿಜಯಪುರದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. 519 ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ 518 ಮೀಟರ್ ನೀರು ಸಂಗ್ರಹವಾಗಿದೆ.

Vijayapura Almatti Reservoir
ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ

By

Published : Aug 5, 2021, 10:23 AM IST

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ‌ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.

519.60 ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಬೆಳಗ್ಗಿನ ಹೊತ್ತಿಗೆ 518.69 ಮೀಟರ್​​ನಷ್ಟು ನೀರು ಸಂಗ್ರಹವಾಗಿದೆ. ಆದರೆ, ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು ಜಲಾಶಯದ ಒಳಹರಿವು ಕಡಿಮೆಯಾಗಿದೆ.

ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇಂದು (ಜುಲೈ 5) 1,74,340 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ, 1,68,912 ಲಕ್ಷ ಕ್ಯೂಸೆಕ್ ನೀರು ನದಿ ಬಿಡಲಾಗಿದೆ. ಕೃಷ್ಣಾಭಾಗ್ಯ ಜಲ ನಿಗಮ (KBJN) ಅಧಿಕಾರಿಗಳು ನೀರು ಸಂಗ್ರಹಕ್ಕೆ ಮುಂದಾದ ಕಾರಣ ಕಡಿಮೆ ಪ್ರಮಾಣದಲ್ಲಿ‌ ನದಿಗೆ ಹರಿಸಲಾಗ್ತಿದೆ.

ವಿದ್ಯುತ್ ಉತ್ಪಾದನೆ: 55 ಮೆಗಾವ್ಯಾಟ್ ಸಾಮರ್ಥ್ಯದ 5 ಘಟಕ ಹಾಗೂ 15 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೇರಿ ಒಟ್ಟು 6 ಘಟಕಗಳು ಇರುವ ವಿದ್ಯುದಾ​ಗಾರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

26 ಗೇಟ್​ಗಳ ಮೂಲಕ ನೀರು ಹೊರಕ್ಕೆ:ಜಲಾಶಯದ ಎಲ್ಲಾ 26 ಗೇಟ್​ಗಳ ಮೂಲಕ 1,68,912 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

ಕೃಷ್ಣಗೆ ಬಾಗಿನ:ಕೋವಿಡ್ ಹೆಚ್ಚಳವಾಗಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ಕೃಷ್ಣ ನದಿಗೆ ಬಾಗಿನ ಅರ್ಪಿಸುವುದು ಅನುಮಾನವಾಗಿದೆ. ಸಿಎಂ ಬದಲಾಗಿ ಸಚಿವರು, ಇಲ್ಲವೇ ಅಧಿಕಾರಿಗಳು ಬಾಗಿನ ಅರ್ಪಿಸಬಹುದು.

ಇದನ್ನೂಓದಿ: ಭಟ್ಕಳ: ಅಲೆಯ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಪಲ್ಟಿ

ABOUT THE AUTHOR

...view details