ವಿಜಯಪುರ: ದೇಶದಾದ್ಯಂತ ಕೊರೊನಾ ವಿರುದ್ಧ ಲಾಕ್ಡೌನ್ ಆದೇಶ ಜಾರಿಯಾಗಿದೆ. ಈ ನಡುವೆ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಬೀದಿ ಬದಿಯ ತರಕಾರಿ ವ್ಯಾಪಾರಿಗಳು ಸರ್ಕಾರದ ಆದೇಶ ಗಾಳಿಗೆ ತೂರಿರುವ ಘಟನೆ ವರದಿಯಾಗಿದೆ. ರಾಜ್ಯ ಸರ್ಕಾರ ಕೂರೋನಾ ಎಮರ್ಜೆನ್ಸಿ ಹಿನ್ನೆಲೆ ಮಾರ್ಚ್ 31ರ ವರೆಗೆ ಯಾವುದೇ ಮಾರುಕಟ್ಟೆಗಳನ್ನೂ ತೆರೆಯದಂತೆ ಆದೇಶ ನೀಡಿದ್ದಾರೆ.
ಕೊರೊನಾ ಲಾಕ್ಡೌನ್: ಸರ್ಕಾರಿ ಆದೇಶ ಧಿಕ್ಕರಿಸಿ ಬೀದಿಯಲ್ಲೇ ತರಕಾರಿ ವ್ಯಾಪಾರ - ವಿಜಯಪುರದಲ್ಲಿ ತರಕಾರಿ ಮಾರಾಟ
ದೇಶದಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಎಲ್ಲಾ ರಾಜ್ಯಗಳು ಲಾಕ್ಡೌನ್ ಆದೇಶ ಹೊರಡಿಸಿವೆ. ಆದರೆ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಬಾರಾ ಕಮಾನ್ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ತರಕಾರಿ ಮಾರಾಟ ಮಾಡಲಾಗಿದೆ. ಬಳಿಕ ಗಾಂಧಿ ಚೌಕ ಠಾಣೆಯ ಪೊಲೀಸರು ಮಾರುಕಟ್ಟೆಯನ್ನು ತೆರವುಗೊಳಿಸಿದ್ದಾರೆ.
ಕೊರೊನಾ ಲಾಕ್ಡೌನ್: ಸರ್ಕಾರಿ ಆದೇಶ ಧಿಕ್ಕರಿಸಿ ಬೀದಿಯಲ್ಲೇ ತರಕಾರಿ ವ್ಯಾಪಾರ
ಆದರೆ ನಗರದ ಬಾರಾ ಕಮಾನ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ 144 ಸೆಕ್ಷನ್ ಜಾರಿ ಮಾಡಿದ್ರು ತರಕಾರಿ ವ್ಯಾಪಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ರಾಜಾರೋಷವಾಗಿ ವ್ಯಾಪಾರದಲ್ಲಿ ತೊಡಗಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಗಾಂಧಿ ಚೌಕ ಠಾಣೆಯ ಪೊಲೀಸರು ಮಾರುಕಟ್ಟೆಯನ್ನು ತೆರವುಗೊಳಿಸಿದ್ದಾರೆ.