ವಿಜಯಪುರ: ಜಿಲ್ಲೆಯಲ್ಲಿ 51 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 558ಕ್ಕೆ ಏರಿಕೆಯಾಗಿದೆ.
ಗುಮ್ಮಟನಗರಿಯಲ್ಲಿ ಇಂದು 51 ಪಾಟಿಸಿವ್ - coronavirus death toll in Vijayapura
ಇಲ್ಲಿಯವರೆಗೆ 404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 143 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 29,992 ಜನರ ಗಂಟಲು ಮಾದರಿ ಪಡೆದುಕೊಳ್ಳಲಾಗಿದೆ..
ಇಂದು ದಾಖಲಾದ ಪಾಸಿಟಿವ್ ಪ್ರಕರಣಗಳಲ್ಲಿ ಓರ್ವ ಬಾಲಕ, ಇಬ್ಬರು ಬಾಲಕಿಯರು, 28 ಜನ ಪುರುಷರು, 13 ಮಹಿಳೆಯರು, 5 ಜನ ಯುವಕರು, ಇಬ್ಬರು ಯುವತಿಯರು ಸೇರಿದ್ದಾರೆ. ಇದರಲ್ಲಿ 43 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದೆ. ಓರ್ವ ಮಹಾರಾಷ್ಟ್ರ ಹಾಗೂ 3 ಜನ ಬೆಂಗಳೂರಿಂದ ಬಂದವರಾಗಿದ್ದಾರೆ.
ಇಂದು 30 ಜನ ಗುಣುಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 143 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 29,992 ಜನರ ಗಂಟಲು ಮಾದರಿ ಪಡೆದುಕೊಳ್ಳಲಾಗಿದೆ. ಇದರಲ್ಲಿ 28,173 ಜನರ ವರದಿ ನೆಗಟಿವ್ ಬಂದಿವೆ. 558 ಜನರ ವರದಿ ಪಾಸಿಟಿವ್ ಬಂದಿವೆ. ಇನ್ನೂ 1,261 ಜನರ ವರದಿ ಬರಬೇಕಿದೆ.