ವಿಜಯಪುರ: ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಕಳು ಸಹ ಮೃತಪಟ್ಟಿದೆ. ಇಂಡಿ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ಈ ಅವಘಡ ನಡೆದಿದೆ.
ಗೋವು ಸಾಗಿಸುತ್ತಿದ್ದ ವಾಹನ-ಕಾರಿನ ನಡುವೆ ಡಿಕ್ಕಿ: ಬಂಥನಾಳ ಶ್ರೀಗಳಿಗೆ ಗಾಯ - ವಾಹನ
ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.
ಏರ್ ಬ್ಯಾಗ್ನಿಂದಾಗಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಅವರನ್ನು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಲ್ಲಾಪುರದಿಂದ ವಿಜಯಪುರ ಕಡೆಗೆ ಬಂಥನಾಳ ಸ್ವಾಮೀಜಿಗಳು ಆಗಮಿಸುತ್ತಿದ್ದರು.ಇದೇ ಸಂದರ್ಭದಲ್ಲಿ ಸೊಲ್ಲಾಪುರಕ್ಕೆ ಅಕ್ರಮವಾಗಿ ವಾಹನವೊಂದರಲ್ಲಿ ಖದೀಮರು ಗೋವುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕಾರ್ ಹಾಗೂ 407 ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಈ ವೇಳೆ ರೊಚ್ಚಿಗೆದ್ದ ನಂದ್ರಾಳ್ ಹಾಗೂ ಭತಗುಣಕಿ ಗ್ರಾಮಸ್ಥರು ಗೋವು ಸಾಗಿಸುತ್ತಿದ್ದ 6 ಜನರನ್ನು ತರಾಟೆಗೆ ತೆಗೆದುಕೊಂಡು, ಖದೀಮರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.