ಕರ್ನಾಟಕ

karnataka

ETV Bharat / state

ಇಂದು ಆಲಮಟ್ಟಿಗೆ ಸಿಎಂ ಬಿಎಸ್​ವೈ ಭೇಟಿ: ಬಾಗಿನ ಅರ್ಪಿಸುವ ಸಾಧ್ಯತೆ

ಸಿಎಂ ಬಿ.ಎಸ್​.ಯಡಿಯೂರಪ್ಪ ಮಧ್ಯಾಹ್ನ 12.30ಕ್ಕೆ ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ನಂತರ ಜಲಾಶಯ ವೀಕ್ಷಣೆ ನಡೆಸಲಿದ್ದು, ಈ ವೇಳೆ ಕೃಷ್ಣೆಗೆ ಬಾಗಿನ ಅರ್ಪಿಸುವ ಸಾಧ್ಯತೆ ಇದೆ.

CM BS Y visits to Alamatti
ವೈಮಾನಿಕ ಸಮೀಕ್ಷೆ ಹಿನ್ನೆಲೆ: ಆಲಮಟ್ಟಿಗೆ ಸಿಎಂ ಬಿಎಸ್​ವೈ ಭೇಟಿ..

By

Published : Aug 25, 2020, 11:49 AM IST

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಮಧ್ಯಾಹ್ನ ಆಗಮಿಸುವ ಹಿನ್ನೆಲೆಯಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆಲಮಟ್ಟಿಗೆ ಭೇಟಿ ನೀಡಲಿರುವ ಸಿಎಂ ಬಿಎಸ್​ವೈ

ಈಗಾಗಲೇ ಬೆಳಗಾವಿಗೆ ಆಗಮಿಸಿರುವ ಸಿಎಂ ಮಧ್ಯಾಹ್ನ 12.30ಕ್ಕೆ ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ನಂತರ ಜಲಾಶಯ ವೀಕ್ಷಣೆ ನಡೆಸಲಿದ್ದು, ಈ ವೇಳೆ ಕೃಷ್ಣೆಗೆ ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಸೇರಿ ಸುಮಾರು 95 ಜನರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದ್ದು, ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗಲಕೋಟೆ, ವಿಜಯಪುರ ಪೊಲೀಸ್ ಅಧಿಕಾರಿಗಳು ಜಲಾಶಯ ಹಾಗೂ ಹೆಲಿಪ್ಯಾಡ್​ ಸ್ಥಳಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆ ಕೈಗೊಂಡು ಪರಿಶೀಲನೆ ನಡೆಸಿದ್ದಾರೆ. ಸಿಎಂ ಭದ್ರತೆಗಾಗಿ ಇಬ್ಬರು ಎಸ್​ಪಿ, 3 ಡಿವೈಎಸ್ಪಿ, 7 ಸಿಪಿಐ, 26 ಪಿಎಸ್​​ಐ, 25 ಎಎಸ್​ಐ, 64 ಹೆಡ್​ ಕಾನ್ಸ್​ಸ್ಟೇಬಲ್​, 158 ಕಾನ್ಸ್​ಸ್ಟೇಬಲ್, 18 ಮಹಿಳಾ ಕಾನ್ಸ್​ಸ್ಟೇಬಲ್, 4 ಡಿಎಆರ್, 2 ಐಆರ್​ಬಿ ಪಡೆ, ಕೆ.ಎಸ್.ಐ.ಎಸ್.ಎಫ್ ಪಡೆಗಳನ್ನು ನಿಯೋಜಿಸಲಾಗಿದೆ.

ಸಿಎಂ ಆಗಮಿಸುವ ಹಿನ್ನೆಲೆ ನಿನ್ನೆ ಬೆಳಗಾವಿಯಿಂದ ಒಂದು ಸೇನಾ ಹೆಲಿಕಾಪ್ಟರ್ ಬಂದು ಹೆಲಿಪ್ಯಾಡ್​ ಸ್ಥಳವನ್ನು ಪರಿಶೀಲನೆ ಮಾಡಿದೆ. ಆಲಮಟ್ಟಿ ಜಲಾಶಯದ ಹೊರ ಭಾಗದಲ್ಲಿ ಮತ್ತು ಜಲಾಶಯವನ್ನು ಹೂವುಗಳಿಂದ ಸಿಂಗಾರಗೊಳಿಸಲಾಗಿದೆ. ಈಗಾಗಲೇ 108 ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಪೂಲೀಸ್ ಇಲಾಖೆ ಸಿಬ್ಬಂದಿ ಬಿಗಿ ಬಂದೋಬಸ್ತ್​​ ಕೈಗೊಂಡಿದ್ದಾರೆ.

ಉನ್ನತ ಅಧಿಕಾರಿಗಳ ಸಭೆ ನಂತರ ಸಿಎಂ ಬಿಎಸ್​​ವೈ ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿ ಪ್ರವಾಹದಿಂದ ಹಾನಿಯಾದ ಬಗ್ಗೆ ಮತ್ತು ನೆರೆಯಿಂದ ಸಮಸ್ಯೆಯಾದ ಬಗ್ಗೆ ವರದಿ ಪಡೆಯಲಿದ್ದಾರೆ. ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಸಂಜೆ ಬೆಳಗಾವಿಗೆ ವಾಪಸ್ ತೆರಳಲಿದ್ದಾರೆ.

ABOUT THE AUTHOR

...view details