ವಿಜಯಪುರ: 8 ದಿನದ ಹಿಂದೆ ಹುಟ್ಟಿದ ಮಗುವನ್ನು ಸಾಕಲು ಆಗದೇ ಕೇವಲ 5,000 ರೂ.ಗೆ ಬಾಣಂತಿಯೊಬ್ಬಳು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೂರು ಬಾರಿ ಅತ್ಯುತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಯ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಗು ಮಾರಾಟ ಪ್ರಕರಣ ಆ. 26ರಂದು ನಡೆದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಘಟನೆ:
ಜಿಲ್ಲೆಯ ತಿಕೋಟಾ ಗ್ರಾಮದ ಬಿಜ್ಜರಗಿಯ ರೇಣುಕಾ ಶಿವಾನಂದ ಕಾಂಬಳೆ ದಂಪತಿಗೆ ಆ.19 ರಂದು ಸಹಜ ಹೆರಿಗೆಯಾಗಿ ರೇಣುಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಣಂತಿಗೆ ಕಸ್ತೂರಿ ಎಂಬ ನರ್ಸ್ ಪರಿಚಯವಾಗಿ ಮಗು ನೀಡುತ್ತೀರಾ ಎಂದು ನರ್ಸ್ ಕೇಳಿದ್ದರು. ಆಗ ಬಾಣಂತಿ ರೇಣುಕಾ ಮನೆಯವರನ್ನು ವಿಚಾರಿಸುವುದಾಗಿ ಹೇಳಿದ್ದಾರೆ. ರೇಣುಕಾ ಆ. 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ. 26ರಂದು ಆಸ್ಪತ್ರೆಗೆ ಆಗಮಿಸಿದ್ದ ಬಾಣಂತಿ ರೇಣುಕಾ, ನರ್ಸ್ ಕಸ್ತೂರಿಯನ್ನು ಭೇಟಿಯಾಗಿ 5ಸಾವಿರ ರೂ. ಪಡೆದು ಮಗುವನ್ನು ನೀಡಿದ್ದಾರೆ.