ಕರ್ನಾಟಕ

karnataka

ETV Bharat / state

ಸಿಡಿಲೇಡಿ ಭೇಟಿಗಾಗಿ ಕಾಯುತ್ತಿರುವ ಪೋಷಕರು: ಎಸ್ಐಟಿಗೆ ಮನವಿ ಸಲ್ಲಿಕೆ - ಎಸ್ಐಟಿ

ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿಡಿಲೇಡಿ ಪೋಷಕರು ತಮ್ಮ ಮಗಳ ಭೇಟಿ ಮಾಡಲು ಅವಕಾಶ ನೀಡುವಂತೆ ಎಸ್​ಐಟಿಗೆ ಮನವಿ ಮಾಡಿದ್ದಾರೆ.

CD case
ಸಿಡಿಲೇಡಿ ಭೇಟಿಗಾಗಿ ಕಾಯುತ್ತಿರುವ ಪೋಷಕರು

By

Published : Apr 4, 2021, 11:41 AM IST

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಕುಟುಂಬ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ನಿಡಗುಂದಿಯಲ್ಲಿ ವಾಸವಾಗಿದೆ.

ಏಪ್ರಿಲ್ 1ರಂದು ನಿಡಗುಂದಿಯ ಯುವತಿ ಪೋಷಕರ ಅಜ್ಜಿ ಮನೆಗೆ ಆಗಮಿಸಿದ ಅವರು, ಯುವತಿಯ ಅಜ್ಜಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಇದನ್ನೂ ಓದಿ:ಸಿಡಿ ಲೇಡಿಗೆ ನಾನು ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ. ಸುಧಾಕರ್

ನಾಳೆ ಅಥವಾ ನಾಡಿದ್ದು ತಮ್ಮ ಮಗಳನ್ನು ಭೇಟಿ ಮಾಡಲು ಅವಕಾಶ ಸಿಗಬೇಕೆಂಬ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.
ತಮ್ಮ ಮಗಳನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಈಗಾಗಲೇ ಎಸ್​ಐಟಿಗೆ ಪೋಷಕರು ಮನವಿ ಮಾಡಿದ್ದಾರೆ.

ಇದುವರೆಗೂ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ನಿಡಗುಂದಿಯಲ್ಲೇ ಪೋಷಕರು ಉಳಿದುಕೊಂಡಿದ್ದಾರೆ.

ABOUT THE AUTHOR

...view details