ವಿಜಯಪುರ: ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಯುವಕರು ಡ್ರೈವಿಂಗ್ ಸೀಟ್ ಬದಲಿಸಿ ಹುಚ್ಚಾಟ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಇದ್ಯಾಕೋ ಅತಿಯಾಯ್ತು.. ಚಲಿಸುವ ಕಾರಿನಲ್ಲಿಯೇ ಯುವಕರ ಹುಚ್ಚಾಟ : ವಿಡಿಯೋ
ತಮ್ಮ ಜೀವಕ್ಕೂ ಹಾಗೂ ಮುಂದೆ ಬರುವ ವಾಹನ ಸವಾರರ ಜೀವಕ್ಕೂ ಸಂಚಕಾರ ತರುವಂತಹ ಇಂತಹ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ..
ಚಲಿಸುವ ಕಾರಿನಲ್ಲಿಯೇ ಯುವಕರ ಹುಚ್ಚಾಟ
ಕಾರು ವೇಗವಾಗಿ ಚಲಿಸುತ್ತಿದ್ದಾಗಲೇ ಕಾರು ಓಡಿಸುತ್ತಿದ್ದ ಯುವಕ ಸ್ಟ್ರೇರಿಂಗ್ ಬಿಟ್ಟು ಹಿಂಬದಿ ಸೀಟಿಗೆ ಬಂದಿದ್ದಾನೆ. ಇದೇ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕ ಸ್ಟೇರಿಂಗ್ ಹಿಡಿಯಲು ಮುಂದಾಗಿದ್ದಾನೆ. ಕಾರಿನಲ್ಲಿದ್ದ ಇನ್ನೊಬ್ಬ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ತಮ್ಮ ಜೀವಕ್ಕೂ ಹಾಗೂ ಮುಂದೆ ಬರುವ ವಾಹನ ಸವಾರರ ಜೀವಕ್ಕೂ ಸಂಚಕಾರ ತರುವಂತಹ ಇಂತಹ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಜಯಪುರದ ಯುವಕರು ಕಾರಲ್ಲಿ ಪ್ರವಾಸ ಹೊರಟ ವೇಳೆ ಈ ಹುಚ್ಚು ಸಾಹಸ ಮೆರೆದಿದ್ದಾರೆ.
Last Updated : Feb 8, 2021, 9:07 PM IST