ವಿಜಯಪುರ: ಬಿಜೆಪಿ ನಾಯಕರ ವಿರುದ್ಧ ಮಾತನಾಡದಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ನೋಟಿಸ್ ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿ ನಾನು ಯಾರನ್ನೂ ಬಿಡಲ್ಲ ಅಬ್ಬರಿಸುತ್ತೇನೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ಇಂತಹ ಹೇಳಿಕೆಗೆ ಪ್ರತಿಕ್ರಿಯಿಸಲು ನನಗೆ ಸಮಯ ಇಲ್ಲ. ನಾನು ಯಾರನ್ನೂ ಬಿಡಲ್ಲ, ಅಬ್ಬರಿಸುತ್ತೇನೆ. ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಅಬ್ಬರಿಸಲು ಸಮಯ ಇಲ್ಲ ಎಂದರು. ನಾನು ಯಾರಿಗಾದರೂ ಸಡಲು ಬಿಡ್ತಿನಾ..? ನಾನು ಅಬ್ಬರಿಸುತ್ತೇನೆ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ ಎಂದರು.