ವಿಜಯಪುರ:ಏ ತೋ ಝಲಕ್ ಹೈ, ಪಿಕ್ಚರ್ ಅಭಿ ಬಾಕಿ ಹೈ, ಎನ್ನುವ ಮೂಲಕ ಕನ್ನಡ ಪರ ಸಂಘಟನೆಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಏ ತೋ ಝಲಕ್ ಹೈ, ಪಿಕ್ಚರ್ ಅಭಿ ಬಾಕಿ ಹೈ': ಕನ್ನಡ ಸಂಘಟನೆಗಳ ವಿರುದ್ಧ ಯತ್ನಾಳ್ ಗುಡುಗು - ವಿಜಯಪುರ ಸುದ್ದಿ
ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಕುರಿತು ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸರ್ಕಾರದ ವಿರುದ್ಧ ಕರೆ ನೀಡಿರುವ ಬಂದ್ ವಿಫಲಗೊಳಿಸುವಂತೆ ಕರೆ ಕೊಟ್ಟಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನಗರದ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದು, ಬಂದ್ ವಿಫಲಗೊಳಿಸುವಂತೆ ಜನತೆಗೆ ಕರೆ ನೀಡಿದ್ದಾರೆ.
ಡಿ. 5 ರಂದು ಕರ್ನಾಟಕ ಬಂದ್ ಕರೆ ನೀಡಿರುವ ಕುರಿತು ಮಾತನಾಡಿದ ಅವರು, ಕನ್ನಡವನ್ನು ನನಗೆ ಕಲಿಸಲು ಬರಬೇಡಿ, ನಗರದಲ್ಲಿ ಯಾರು ಅಂಜಬೇಡಿ, ಯಾರು ಅಂಗಡಿ ಬಂದ್ ಮಾಡಬೇಡಿ, ಯಾರು ಬರ್ತಾರೋ ಬರಲಿ ಎಂದು ಸವಾಲು ಹಾಕಿದ್ದಾರೆ. ಶಾಸಕರ ವಿರುದ್ಧ ಹಗುರವಾಗಿ ಮಾತನಾಡಿದರೆ ಕ್ರಮ ಜರುಗಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.