ಕರ್ನಾಟಕ

karnataka

ETV Bharat / state

ಬಿಜೆಪಿ ಪಕ್ಷ ಯಾರಪ್ಪಂದಲ್ಲ, ಪಕ್ಷ ಬೆಳೆಸಿದವರು ನಾವು: ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು - ಈಟಿವಿ ಭಾರತ್ ಕನ್ನಡ ಸುದ್ದಿ

ಸಚಿವ ನಿರಾಣಿ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ತಿರುಗೇಟು. ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಗೆ ಹೈಕಮಾಂಡ್ ಅಸ್ತು ಎಂದಿದೆ ಎಂದ ಯತ್ನಾಳ್.

ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

By

Published : Jan 15, 2023, 5:47 PM IST

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರು ಮಾತನಾಡಿದರು

ವಿಜಯಪುರ: ಸಂಕ್ರಮಣ ಹಬ್ಬದ ಸಂಭ್ರಮ ಇದೆ. ಇಂದು ಒಳ್ಳೆಯ ಸುದ್ದಿಗಳನ್ನು ಮಾತನಾಡೋ ಸಂಕ್ರಮಣ. ಬಹಳ ಸಂತೋಷವಾಗಿದೆ. ನಮ್ಮ ಪಕ್ಷದ ಹೈಕಮಾಂಡ್ ಬೆಳಿಗ್ಗೆ ಕರೆ ಮಾಡಿ ಮೀಸಲಾತಿ ವಿಚಾರದಲ್ಲಿ ಸಭೆ ಕರೆಯೋದಾಗಿ ಹೇಳಿದ್ದಾರೆ. ಬೇಡಿಕೆ ಈಡೇರಿಸಲು ಹೈಕಮಾಂಡ್ ಅಸ್ತು ಎಂದಿದೆ ಎಂದು ವಿಜಯಪುರ ‌ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂತಸ ವ್ಯಕ್ತಪಡಿಸಿದರು.

ಇದು ಕಳೆದ ಎರಡು ವರ್ಷಗಳಿಂದ ಕೂಡಲಸಂಗಮ ಶ್ರೀಗಳ ಪಾದಯಾತ್ರೆಯ ಪ್ರತಿಫಲ. ಮಕರ ಸಂಕ್ರಮಣದ ಉತ್ತರಾಯಣದ ಶುಭ ಪ್ರಸಂಗದಲ್ಲಿ ಈ ನಿಲುವು ತೆಗೆದುಕೊಂಡಿದೆ. ಆದಷ್ಟು ಬೇಗ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಯಾಗಲು ಹೋಗುತ್ತಿದ್ದೇವೆ. ಶೀಘ್ರವೇ ಒಳ್ಳೆಯ ಸುದ್ದಿಯನ್ನು ಕೇಂದ್ರ ಕೊಡಲಿದೆ ಎಂದು ಯತ್ನಾಳ್ ತಿಳಿಸಿದರು.

ನಿರಾಣಿಗೆ ಎದುರೇಟು:ಇದೇ ವೇಳೆ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್,ಕೆಲ ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಪಕ್ಷ ಎಲ್ಲ ಗಮನಿಸಿದೆ ಎಂದು ಹೇಳಿದ್ದಾರೆ. ಚಿಲ್ಲರೆ ವ್ಯಕ್ತಿಗಳ ಬಗ್ಗೆ, ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲ ಎಂದು ನಿರಾಣಿ ಹೇಳಿಕೆಗೆ ಕೌಂಟರ್ ನೀಡಿದರು. ಹಬ್ಬವಿರೋ ಕಾರಣ‌ ಒಳ್ಳೆಯದನ್ನ ಮಾತನಾಡೋಣ. ಒಳ್ಳೆ ಸುದ್ದಿ ಬಂದಿದೆ. ಮೀಸಲಾತಿ ವಿಚಾರದಲ್ಲಿ ಹೈಕಮಾಂಡ್ ಒಪ್ಪಿದೆ. ಕೇಂದ್ರದ ಹೈಕಮಾಂಡ್ ಹಾಗೂ ಪಕ್ಷ ಸಕಾರಾತ್ಮಕವಾಗಿ ಸ್ಪಂದಿಸೋದಾಗಿ ಹೇಳಿದ್ದಾರೆ ಎಂದರು.

ಪಕ್ಷ ಯಾರಂಪದ್ದು ಅಲ್ಲ: ಪಕ್ಷ ಯಾರಪ್ಪಂದು ಅಲ್ಲ. ವಿಜಯಪುರದಲ್ಲಿ ಪಕ್ಷ ಕಟ್ಟಿದವರು ನಾವು. ಹಳ್ಳಿಯಲ್ಲಿ ಇರುವ ರೈತರನ್ನು ಕೇಳಿದರೂ ಬಿಜೆಪಿ ಕಟ್ಟಿದವರು ಯತ್ನಾಳ್ ಎಂದು ಹೇಳುತ್ತಾರೆ. ನಮ್ ಯತ್ನಾಳ್ ಗೌಡಪ್ಪಾ ಪಾರ್ಟಿ ಕಟ್ಯಾನ್. ಅಂವಾ‌ ಕಮಲ ಹೂ ನಮ್ಮೂರಿಗೆ ತಂದಾವಾ ಅಂತಾರೆ. ನನ್ನನ್ನು ಪಕ್ಷದಿಂದ ಹೊರ ಹಾಕುವ ತಾಕತ್ತು ಯಾರಿಗೂ ಇಲ್ಲ, ಟಿಕೆಟ್ ಅಲ್ಲ ನೀವು ನೋಡುವಂತಿರಿ. ಉತ್ತರಾಯನ ಇಂದು ಆರಂಭವಾಗಿದೆ. ಇನ್ನು ನಮ್ಮದು ಇರುತ್ತಾ ಹೋಗುವುದಿದೆ. ಟಿಕೆಟ್ ಬಿಡಿ, ಟಿಕೆಟ್ ಕೊಡಲು ನಾವೇ ಬಂದರೂ‌ ಆಶ್ಚರ್ಯವಿಲ್ಲ ಎಂದು ಹೇಳಿದರು.‌

ಶೀಘ್ರ ಕೇಂದ್ರ ನಾಯಕರ ಭೇಟಿ:ಮೀಸಲಾತಿ ವಿಚಾರದಲ್ಲಿ ಶೀಘ್ರವೇ ಕೇಂದ್ರ ನಾಯಕರ ಭೇಟಿಯಾಗುತ್ತೇವೆ. ಇದೇ ಜನವರಿ 21ರಂದು ವಿಜಯಪುರಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ ಆಗಮಿಸುತ್ತಿದ್ದಾರೆ. ಮೀಸಲಾತಿ ವಿಚಾರವನ್ನು ಕೇಂದ್ರದ ವರಿಷ್ಠ ಮಂಡಳಿ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವ ನ್ಯಾಯ ಕೊಡದಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಚಿಲ್ಲರೆಗಳಿಗೆ ಯತ್ನಾಳರನ್ನು ತುಳಿಯುವುದನ್ನು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಯತ್ನಾಳ್​ರನ್ನು ಯಾರೂ ತುಳಿಯಲಾಗಲ್ಲ. ಯತ್ನಾಳ್ ಬೇರು ಬಹಳ ಆಳವಾಗಿವೆ. ಬಿಜೆಪಿ ಸಂಘಟನೆಯ ಮೂಲದಲ್ಲಿ ಯತ್ನಾಳ್ ಶಕ್ತಿ ಅಡಗಿದೆ, ಜನರಲ್ಲಿ ನಮ್ಮ ಬೇರುಗಳಿವೆ. ನನ್ನನ್ನು ಜನರು ಬಿಡಲ್ಲ, ಜನರಿದ್ದವರಿಗೆ ಲೀಡರ್ ಎಂದು ಕರೆಯುತ್ತಾರೆ ಎಂದು ಹೇಳಿದರು.

ಓದಿ:ಕಾರು ಚಾಲಕ ಸಾವಿನ ಕುರಿತು ನಿರಾಣಿ ಹೇಳಿಕೆ: ಸಿಬಿಐ ತನಿಖೆಗೆ ಸಿಎಂಗೆ ಪತ್ರ ಬರೆದ ಯತ್ನಾಳ್

ABOUT THE AUTHOR

...view details