ಕರ್ನಾಟಕ

karnataka

ETV Bharat / state

ಒಂದಲ್ಲ ಎರಡಲ್ಲ 5 ಕ್ರೂಸರ್​ ವಾಹನ ಕದ್ದಿದ್ದ ಖದೀಮ ಹೇಗೆ ಸಿಕ್ಕಿಬಿದ್ದ ಗೊತ್ತಾ? - ಎಸ್ಪಿ ಪ್ರಕಾಶ ನಿಕ್ಕಂ

ಕ್ರೂಸರ್​​ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಗೋಲ ಗುಮ್ಮಜ‌ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲ ಅಧಿಕಾರಿಗಳಿಗೆ‌ 20 ಸಾವಿರ ರೂ. ನಗದು‌ ಬಹುಮಾನವನ್ನು ಎಸ್ಪಿ ಪ್ರಕಾಶ ನಿಕ್ಕಂ ಘೋಷಿಸಿದ್ದಾರೆ.

ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

By

Published : Nov 5, 2019, 6:52 PM IST

ವಿಜಯಪುರ:ಕ್ರೂಸರ್ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಗೋಲ ಗುಮ್ಮಜ‌ ಪೊಲೀಸ್ ಠಾಣೆಯ ಪಿಎಸ್​​ಐ ಮತ್ತು ಸಿಬ್ಬಂದಿ ನಗರದ ಸಿಂಧಗಿ ಬೈಪಾಸ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಸಂಶಯಾಸ್ಪದ ವ್ಯಕ್ತಿಯನ್ನ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತ ಕ್ರೂಸರ್ ಕಳ್ಳ ಎಂಬುದು ಗೊತ್ತಾಗಿದೆ. ಅಲ್ಲದೇ ಆರೋಪಿ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.

ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಹಾವೇರಿ ಜಿಲ್ಲೆಯ ಪ್ರಕಾಶ ಗಾಣಿಗೇರ (26) ಬಂಧಿತ. ಒಟ್ಟು 5 ಕ್ರೂಸರ್ ವಾಹನಗಳನ್ನು ಕಳ್ಳತನ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ವಿಜಯ‌ಪುರದ ಉಕ್ಕಲಿ‌ ಗ್ರಾಮದಲ್ಲಿ ಒಂದು, ಬೆಳಗಾವಿಯ ಅಥಣಿ‌‌ಯಲ್ಲಿ‌ ಒಂದು, ಧಾರವಾಡದಲ್ಲಿ ಒಂದು‌ ಹಾಗೂ ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ಎರಡು ಕ್ರೂಸರ್ ಕಳ್ಳತನ ಮಾಡಿದ್ದಾನೆ.

ಈ‌ ಹಿಂದೆ ಕಳ್ಳತನ‌ ಮಾಡಿದ್ದ ಆರೋಪಗಳು ಇತನ‌ ಮೇಲೆ ಇವೆ. ಒಟ್ಟು ಐದು ಕ್ರೂಸರ್ ವಾಹನ, 36 ಲಕ್ಷ ಮೌಲ್ಯದ 5 ತೂಫಾನ್ ಟೆಂಪೋ ಕ್ರೂಸರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೂಸರ್ ಕಳ್ಳತನ ಜಾಲವನ್ನು ಪತ್ತೆ ಮಾಡಲು ಪೊಲೀಸ್​ ತಂಡ ರಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲ ಅಧಿಕಾರಿಗಳಿಗೆ‌ 20 ಸಾವಿರ ರೂ. ನಗದು‌ ಬಹುಮಾನವನ್ನು ಎಸ್ಪಿ ಪ್ರಕಾಶ ನಿಕ್ಕಂ ಘೋಷಿಸಿದ್ದಾರೆ.

ABOUT THE AUTHOR

...view details