ವಿಜಯಪುರ: ಬೇಸಿಗೆ ಬಿಸಿಲು ತಪ್ಪಿಸಿಕೊಳ್ಳಲು ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಭಾನುವಾರ ಸಂಭವಿಸಿದೆ.
ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರಲ್ಲಿ ಮುಳಗಿ ಸಾವು
ಬೇಸಿಗೆ ಬಿಸಿಲು ತಪ್ಪಿಸಿಕೊಳ್ಳಲು ಬಾವಿಯಲ್ಲಿ ಈಜಲು ಹೋಗಿದ್ದ ಅಸ್ಲಮ್ ಕುತ್ಬುದ್ದೀನ ಮುದ್ದೇಬಿಹಾಳ ಎಂಬ ಯುವಕ ನಿರಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಅಸ್ಲಮ್ ಕುತ್ಬುದ್ದೀನ ಮುದ್ದೇಬಿಹಾಳ ಎಂದು ಗುರುತಿಸಲಾಗಿದೆ. ನಿಡಗುಂದಿ ಪಟ್ಟಣ ಪಂಚಾಯಿತಿಗೆ ಸೇರಿದ ಸವಳುಬಾವಿಯಲ್ಲಿ ಮಧ್ಯಾಹ್ನನ ಸ್ನೇಹಿತರ ಜತೆ ಅಸ್ಲಮ್ ಈಜಲು ಹೋಗಿದ್ದನು. ಜಿಲ್ಲೆಯಲ್ಲಿ 40 ಡಿಗ್ರಿ ತಾಪಮಾನವಿರುವ ಕಾರಣ ಸಹಜವಾಗಿ ನೀರಿನಲ್ಲಿ ಈಜಲು ಹೋಗಿದ್ದಾರೆ. ಬಾವಿಯಲ್ಲಿ ಕಸವಿದ್ದ ಕಾರಣ ಅಸ್ಲಮ್ ಕಾಲಿಗೆ ಸಿಲುಕಿಕೊಂಡು ಮುಳಗಿರಬಹುದೆಂದು ಹೇಳಲಾಗುತ್ತಿದೆ. ಅಸ್ಲಮ್ ನೀರಿಗಿಳಿದು ಬಹಳ ಸಮಯವಾದರು ಹೋರಗೆ ಬರದ ಕಾರಣ ಆತಂಕಗೊಂಡ ಉಳಿದ ಸ್ನೇಹಿತರು ತಕ್ಷಣ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಮೀನುಗಾರರನ್ನು ಕರೆಯಿಸಿ ಶವದ ಹುಡುಕಾಟ ನಡೆಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.