ಕರ್ನಾಟಕ

karnataka

ETV Bharat / state

ಪತ್ನಿ ಕೊಂದು ಶವ ಅರಣ್ಯಕ್ಕೆಸೆದ ಪೊಲೀಸ್​ ಪೇದೆ - ವಿಜಯಪುರದಲ್ಲಿ ಪೇದೆಯಿಂದಲೇ ಪತ್ನಿ ಹತ್ಯೆ

ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್​ ಪೇದೆಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನೇ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

a-police-constabled-killed-his-wife
ಪೇದೆಯಿಂದಲೇ ಪತ್ನಿ ಕೊಲೆ

By

Published : Apr 4, 2020, 8:41 PM IST

ವಿಜಯಪುರ:ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವವನ್ನು ಅರಣ್ಯ ಪ್ರದೇಶದಲ್ಲಿ ಮುಚ್ಚಿ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೇದೆಯಿಂದಲೇ ಪತ್ನಿ ಕೊಲೆ

ಕೊಲೆಯಾದವರನ್ನು ಸುಮಂಗಲಾ ನಿಂಗರಾಜ ವಾಲೀಕಾರ ಎಂದು ಗುರುತಿಸಲಾಗಿದೆ. ಈಕೆಯ ಪತಿ ಡಿಎಆರ್ ಪೊಲೀಸ್ ಪೇದೆ ನಿಂಗರಾಜ ವಾಲೀಕಾರ ಹಾಗೂ ಆತನ 6 ಸ್ನೇಹಿತರು ಈ ಕೊಲೆ ಪ್ರಕರಣದಲ್ಲಿ ಜೈಲು ಕಂಬಿ ಎಣೆಸುತ್ತಿದ್ದಾರೆ. ಆರೋಪಿ ಪೊಲೀಸ್ ಪೇದೆ ನಿಂಗರಾಜ ವಾಲಿಕಾರ ತನ್ನ ಎರಡನೇ ಪತ್ನಿಯಾಗಿದ್ದ ಮೃತ ಸುಮಂಗಲಾ ವಾಲೀಕಾರ ಮೇಲೆ ಪೇದೆ ಪದೇ ಸಂಶಯ ವ್ಯಕ್ತಪಡಿಸುತ್ತಿದ್ದನು. ಇದರಿಂದ ನಿತ್ಯ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಪೇದೆ ನಿಂಗರಾಜ ಪತ್ನಿ ಕೊಲೆ ಮಾಡಲು ತನ್ನ ಐದು ಸ್ನೇಹಿತರಿಗೆ ಎರಡು ಲಕ್ಷ ರೂ.ಗಳ ಸುಪಾರಿ ನೀಡಿದ್ದ ಎಂಬ ಮಾಹಿತಿ ದೊರೆತಿದೆ.

ಪೇದೆಯಿಂದಲೇ ಪತ್ನಿ ಕೊಲೆ

ಖಾಜಿ ಅಮೀನ ದರ್ಗಾ ಬಳಿಯ ಮನೆಯಲ್ಲಿ ಎರಡು ದಿನಗಳ ಹಿಂದೆ ಸುಮಂಗಲಾ ಅವಳನ್ನು ಕೊಲೆ ಮಾಡಿ ಶವವನ್ನು ಬಾಗೇವಾಡಿ ತಾಲೂಕಿನ ಮಸೂತಿಯ ಅರಣ್ಯ ಪ್ರದೇಶದಲ್ಲಿ ಮುಚ್ಚಿ ಹಾಕಿ ಏನೂ ಆಗದವರಂತೆ ಇದ್ದರು. ಎರಡು ದಿನ ತಮ್ಮ ಮಗಳು ಕಾಣುತ್ತಿಲ್ಲ ಎಂದು ಆಕೆಯ ಪೋಷಕರು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಕಾಣಿಯಾಗಿರುವ ಕುರಿತು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೃತಳ ಪತಿ ಪೇದೆ ನಿಂಗರಾಜನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತನ್ನ ಪತ್ನಿ ಸುಮಂಗಲಾಳನ್ನು ಸ್ನೇಹಿತರ ಜತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸಂಬಂಧ ಪೇದೆ ಲಿಂಗರಾಜ ವಾಲೀಕಾರ, ಪರಸಪ್ಪ ಹರಿಜನ, ತಾನಾಜಿ ಕ್ವಾಟೆ,ಬಾಬು ನದಾಫ್, ತಿರ್ಥಪ್ಪ ಮಾದರ,ರಮೇಶ ವಾಲೀಕಾರ, ಪ್ರವೀಣ ಸಾತಿಹಾಳ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ABOUT THE AUTHOR

...view details