ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ಕಾಯಿಪಲ್ಯೆ ಮಾರುಕಟ್ಟೆಗೆ ತೆರಳುವ ಕೆರೆ ಸಮೀಪದಲ್ಲಿರುವ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮುದ್ದೇಬಿಹಾಳ; ಹದಗೆಟ್ಟ ರಸ್ತೆ.. ವಾಹನ ಸವಾರರ ಪರದಾಟ
ವಿಜಯಪುರ ತಾಲೂಕಿನ ಮುದ್ದೇಬಿಹಾಳ ಪಟ್ಟಣದ ಕಾಯಿಪಲ್ಯೆ ಮಾರುಕಟ್ಟೆಗೆ ತೆರಳುವ ಕೆರೆ ಸಮೀಪದಲ್ಲಿರುವ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.
ಸಂಪೂರ್ಣ ಹದಗೆಟ್ಟ ರಸ್ತೆ: ವಾಹನ ಸವಾರರ ಪರದಾಟ
ಒಳಚರಂಡಿ ಕಾಮಗಾರಿ ಮುಗಿದ ನಂತರ ರಸ್ತೆ ಮಧ್ಯದಲ್ಲಿ ಚೇಂಬರ್ ನಿರ್ಮಿಸಿ, ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಮತ್ತೆ ಆರೆಂಟು ತಿಂಗಳಲ್ಲಿ ಅದೇ ರಾಗ ಅದೇ ಹಾಡು ಎಂಬುವಂತಾಗಿದೆ. ದೊಡ್ಡ ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್ಗಳು ಕೂಡಾ ಕಿತ್ತುಹೋಗಿದ್ದು, ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ದ್ಯಾಮವ್ವನ ಕಟ್ಟೆಯಿಂದ ಇಂದಿರಾ ವೃತ್ತದವರೆಗಿನ ರಸ್ತೆ ಸರಿಪಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಸಿಂಧೆ ಒತ್ತಾಯಿಸಿದ್ದಾರೆ.