ವಿಜಯಪುರ :ಜಿಲ್ಲೆಯಲ್ಲಿಂದು 183 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 9000 ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 9059 ಜನರಿಗೆ ಸೋಂಕು ತಗುಲಿದೆ.
9 ಸಾವಿರ ಗಡಿದಾಟಿದ ಪಾಸಿಟಿವ್ ಸಂಖ್ಯೆ - ವಿಜಯಪುರ ಕೋವಿಡ್ ವರದಿ
ರಾಜಕೀಯ ನಾಯಕರ ಸಾವಿನಿಂದ ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಿದೆ. ಇಂದು ವಿಜಯಪುರದಲ್ಲಿ 183 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ..
ವಿಜಯಪುರ ಜಿಲ್ಲಾ ಕೊರೊನಾ ವರದಿ
ಇಂದು 192 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಡಿಸ್ಚಾರ್ಜ್ ಆದವರ ಸಂಖ್ಯೆ 8210. ನಾನಾ ಕಾಯಿಲೆಯಿಂದ ಇಂದು ಇಬ್ಬರು ಸಾವನ್ನಪ್ಪಿದ್ದು, ಈವರೆಗೆ 156 ಜನರ ಮೃತಪಟ್ಟಿದ್ದಾರೆ.
693 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇಲ್ಲಿಯವರೆಗೆ 95,847 ಜನರ ಮೇಲೆ ನಿಗಾ ಇಡಲಾಗಿದೆ. 99,423 ಜನರ ಸ್ಯಾಂಪಲ್ ಪಡೆಯಲಾಗಿದ್ದು, 88,479 ಜನರ ವರದಿ ನೆಗಟಿವ್ ಬಂದಿದೆ. 9059 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 1924 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.