ವಿಜಯಪುರ:ಆಲಮಟ್ಟಿ ಜಲಾಶಯ ಭರ್ತಿಗೆ 1 ಮೀಟರ್ ಮಾತ್ರ ಬಾಕಿಯಿದ್ದು, ಉತ್ತರ ಕರ್ನಾಟಕದ ಅನ್ನದಾತರ ಜೀವನಾಡಿ ಕೃಷ್ಣೆಗೆ ನಾಡಿನ ಮುಖ್ಯಮಂತ್ರಿ ಯಾವಾಗ ಬಾಗಿನ ಅರ್ಪಿಸುತ್ತಾರೆ ಎಂದು ಈ ಭಾಗದ ಜನ ಎದುರು ನೋಡುತ್ತಿದ್ದಾರೆ.
ಜಲಾಶಯವನ್ನೇ ತನ್ನ ಒಡಲಲ್ಲಿಟ್ಟುಕೊಂಡಿರುವ ಬರದ ಜಿಲ್ಲೆ ವಿಜಯಪುರದಲ್ಲಿ ಈಗಲೂ ನಿರೀಕ್ಷೆಯಷ್ಟು ಮಳೆ ಆಗುತ್ತಿಲ್ಲ. ಜನರು ವರುಣನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಿದೆ. ಏತನ್ಮಧ್ಯೆ ದಕ್ಷಿಣ ಕರ್ನಾಟಕದ ಜಲಾಶಯಗಳಿಗೆ ಬಾಗಿನ ಅರ್ಪಿಸುವಾಗ ಸಿಗುವಷ್ಟು ಆದ್ಯತೆ ಉತ್ತರ ಕರ್ನಾಟಕದ ಕೃಷ್ಣೆಗೆ ಬಾಗಿನ ಅರ್ಪಿಸಲು ರಾಜ್ಯದ ಮುಖ್ಯಮಂತ್ರಿಗಳು ಮುಂದಾಗುತ್ತಿಲ್ಲ ಎಂಬ ಕೂಗು ರೈತ ಮುಖಂಡರಲ್ಲಿದೆ.
ಪ್ರತಿ ವರ್ಷ ಉಳಿದೆಲ್ಲ ಜಲಾಶಯಗಳಿಗಿಂತ ಮುಂಚೆಯೇ ಆಲಮಟ್ಟಿ ಜಲಾಶಯ ಭರ್ತಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ ಸಮಯ ನಿಗದಿ ತಡವಾಗಿಯೇ ಆಗುತ್ತಿರುವುದು ಇಲ್ಲಿನ ಜನರಲ್ಲಿ ಬೇಸರ ತರಿಸಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದೆ. ಈಗಾಗಲೇ 518.15 ಮೀಟರ್ ನೀರು ಸಂಗ್ರಹವಾಗಿದೆ. ಅಲ್ಲದೇ ಹೆಚ್ಚುವರಿ ನೀರನ್ನು 26 ಗೇಟ್ಗಳ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಇದೇ ರೀತಿ ಒಳಹರಿವು ಹೆಚ್ಚಾದರೆ ಇನ್ನೆರೆಡು ದಿನದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಆಶಯವಿದೆ. ಹೀಗಾಗಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಲು ನಾಡಿನ ಮುಖ್ಯಮಂತ್ರಿ ಆಗಮಿಸುವರೇ ಎಂಬ ಕಾತುರದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಜನರಿದ್ದಾರೆ.
ಹಲವು ಬಾರಿ ರದ್ದು: