ಶಿರಸಿ: ಜಿಲ್ಲಾ ಪಂಚಾಯತ್ ಸದಸ್ಯರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕದೇ ಇರುವ ಕಾರಣ ಜಿ.ಪಂ. ಎಂಜಿನಿಯರ್ರನ್ನು ಸದಸ್ಯ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೆಡ್ಸಗಾಂ ನಲ್ಲಿ ಶನಿವಾರ ನಡೆದಿದೆ.
ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಸಂಸದರ ಮುಂದೆಯೇ ಅಧಿಕಾರಿಗಳ ಮೇಲೆ ಜಿಪಂ ಸದಸ್ಯ ಗರಂ! - Sirsi news
ಪಂಚಾಯತ್ ರಾಜ್ ವ್ಯವಸ್ಥೆಗೆ ಧೋಕಾ ಕೊಟ್ಟಂತ ಮನುಷ್ಯ ನೀವು. ಇನ್ನು ಮುಂದೆ ಇಂಥಹ ಅಜಾಗರೂಕತೆ ನಡೆದರೆ ಉಗ್ರವಾದ ಹೋರಾಟವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾಡುವುದಾಗಿ ಅಧಿಕಾರಿಗೆ ಬೆರಳುತೋರಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಉತ್ತರ ಕನ್ನಡ ಜಿಪಂ ಸದಸ್ಯ ಎಲ್.ಟಿ ಪಾಟೀಲ್ ಅವರ ಹೆಸರನ್ನು ಅಧಿಕಾರಿಗಳು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸುವುದನ್ನು ಮರೆತಿದ್ದರು. ಇದರಿಂದ ಸಿಟ್ಟಿಗೆದ್ದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಎಂಜಿನೀಯರ್ ರವಿ ರಾಂಪುರೆ ಅವರು ಸ್ಥಳದಲ್ಲಿಯೇ ಕ್ಷಮೆ ಕೇಳಿದ ಘಟನೆ ನಡೆಯಿತು. ಸಂಸದ ಅನಂತ ಕುಮಾರ್ ಹೆಗಡೆ ಕೂಡಾ ಪ್ರೊಟೋಕಾಲ್ ಪ್ರಕಾರ ಜಿ.ಪಂ ಸದಸ್ಯ ಎಲ್ ಟಿ ಪಾಟೀಲ್ ಅವರ ಹೆಸರನ್ನು ನಮೂದಿಸಬೇಕೆತ್ತೆಂದು ಆಕ್ಷೇಪಿಸಿದರು.
ಪ್ರಧಾನ ಮಂತ್ರ ಗ್ರಾಮ ಸಡಕ್ ಯೋಜನೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಶನಿವಾರ ಅನಂತ ಕುಮಾರ್ ಹೆಗಡೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇಷ್ಟಕ್ಕೂ ಸುಮ್ಮನಾಗದ ಪಾಟೀಲ್ ಸಭೆಯಲ್ಲಿ ಮಾತನಾಡುವಾಗಲೂ ಸಹ, ಗ್ರಾಮ ಪಂಚಾಯತ್, ಪಂಚಾಯತ್ ರಾಜ್ ವ್ಯವಸ್ಥೆಗೆ ಧೋಕಾ ಕೊಟ್ಟಂತ ಮನುಷ್ಯ ನೀವು. ಇನ್ನು ಮುಂದೆ ಇಂಥಹ ಅಜಾಗರೂಕತೆ ನಡೆದರೆ ಉಗ್ರವಾದ ಹೋರಾಟವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾಡುವುದಾಗಿ ಅಧಿಕಾರಿಗೆ ಬೆರಳುತೋರಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.