ಶಿರಸಿ:ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.
ಕಾರು ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು
ಸೈಕಲ್ ಮೇಲೆ ಕಟ್ಟಿಗೆ ತೆಗೆದುಕೊಂಡು ಬರುತ್ತಿದ್ದ ಯುವಕನೊರ್ವನಿಗೆ ಹಿಂಬದಿಯಿಂದ ಫಾರ್ಚುನರ್ ಕಾರು ಗುದ್ದಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಕಿರವತ್ತಿ ಬಳಿ ನಡೆದಿದೆ.
ಯುವಕ ಸಾವು
ಕಿರವತ್ತಿಯ ಉಮೇಶ (35) ಮೃತಪಟ್ಟ ಕೂಲಿ ಯುವಕನಾಗಿದ್ದಾನೆ. ಈತ ಕಿರವತ್ತಿ ಸಮೀಪದ ಕಾಡಿನಿಂದ ಸೈಕಲ್ ಮೇಲೆ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವೇಗವಾಗಿ ಬಂದ ಫಾರ್ಚುನರ್ ಹಿಂಬದಿಯಿಂದ ಗುದ್ದಿದ ಕಾರಣ ಅಪಘಾತ ನಡೆದಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.