ಭಟ್ಕಳ:ತಾಲೂಕಿನ ತೆಂಗಿನಗುಂಡಿಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿ ಯುವಕ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ಮೃತ ಯುವಕ ತೆಂಗಿನಗುಂಡಿ ಹೆಬಳೆ ನಿವಾಸಿ ಶಪೀಸಲ್ ಹಿಬ್ಬುರೆಹಮಾನ ಡಾಂಗೀ (24) ಎಂದು ತಿಳಿದುಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಸಮುದ್ರಕ್ಕೆ ಈಜಲು ತೆರಳಿದಾಗ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನೀರಿನಲ್ಲಿ ಮುಳುಗಿದ ಒಂದು ತಾಸಿನ ಬಳಿಕ ದೇಹ ಸಮುದ್ರದಲ್ಲಿ ಪತ್ತೆಯಾಗಿದೆ. ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ.