ಕರ್ನಾಟಕ

karnataka

By

Published : Dec 5, 2019, 8:52 PM IST

ETV Bharat / state

ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಯಲ್ಲಾಪುರದ ಒಟ್ಟು 1,72,282 ಮತದಾರರಲ್ಲಿ 1,33,564 ಮತಗಳು ಚಲಾವಣೆಯಾಗಿದೆ. ಇದರಲ್ಲಿ 68,182 ಪುರುಷ ಮತದಾರರು ಹಾಗೂ 65365 ಮಹಿಳಾ ಮತದಾರರು ಮತ್ತು ಓರ್ವ ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

srs
ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಶಿರಸಿ :ತೀವ್ರ ಕುತೂಹಲ ಕೆರಳಿಸಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಒಟ್ಟು ಶೇಕಡಾ 77.52 ರಷ್ಟು ಮತದಾನವಾಗಿದ್ದು, ಕಳೆದ ಸಾರ್ವತ್ರಿಕ ಚುನಾವಣೆಗಿಂತ ಶೇಕಡಾ 4 ರಷ್ಟು ಕಡಿಮೆ ಮತದಾನವಾಗಿದೆ.

ಯಲ್ಲಾಪುರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಕ್ಷೇತ್ರದ ಒಟ್ಟು 1,72,282 ಮತದಾರರಲ್ಲಿ 1,33,564 ಮತಗಳು ಚಲಾವಣೆಯಾಗಿದೆ. ಇದರಲ್ಲಿ 68,182 ಪುರುಷ ಮತದಾರರು ಹಾಗೂ 65365 ಮಹಿಳಾ ಮತದಾರರು ಮತ್ತು ಓರ್ವ ಇತರೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕ್ಷೇತ್ರದ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ 3 ವಿವಿಪ್ಯಾಟ್ ಗಳ ಬದಲಾವಣೆ ಮಾಡಲಾಗಿದೆ. ಒಟ್ಟಾರೆಯಾಗಿ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಡಿ.9 ರಂದು ಫಲಿತಾಂಶ ಹೊರಬರಲಿದೆ.

ABOUT THE AUTHOR

...view details