ಕರ್ನಾಟಕ

karnataka

ETV Bharat / state

ದಾಂಡೇಲಿಯಲ್ಲಿದೆ ರಾಜ್ಯದ ಮೊದಲ ಮೊಸಳೆ ಪಾರ್ಕ್

ಕಳೆದ 7 ತಿಂಗಳ ಹಿಂದೆ ದಾಂಡೇಲಿಯಲ್ಲಿ ಲೋಕಾರ್ಪಣೆಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಮೊಸಳೆ ಪಾರ್ಕ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.

World Crocodile Day
ವಿಶ್ವ ಮೊಸಳೆ ದಿನ

By

Published : Jul 17, 2022, 1:55 PM IST

Updated : Jul 18, 2022, 4:33 PM IST

ಕಾರವಾರ: ಪ್ರತಿವರ್ಷ ಜೂನ್ 17ರಂದು ವಿಶ್ವ ಮೊಸಳೆ ದಿನವನ್ನು ಆಚರಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಮೊಸಳೆಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದೇ ಈ ದಿನದ ಉದ್ದೇಶ. ಅದರಂತೆ ಹಲವೆಡೆ ಮೊಸಳೆಗಳ ಪಾರ್ಕ್ ನಿರ್ಮಿಸಲಾಗಿದೆ.

ಮೊಸಳೆ ಪಾರ್ಕ್ ಬಗ್ಗೆ ಸ್ಥಳೀಯರ ಅಭಿಪ್ರಾಯ....

ದಾಂಡೇಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಪರಿಸರ, ಅಭಯಾರಣ್ಯ, ಜಲಸಾಹಸಿ ಚಟುವಟಿಕೆಗಳು ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಇದರ ಜೊತೆಗೆ, ಕಳೆದ 7 ತಿಂಗಳ ಹಿಂದೆ ಲೋಕಾರ್ಪಣೆಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಮೊಸಳೆ ಪಾರ್ಕ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

ದಾಂಡೇಲಿ ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಪಟ್ಟಣ. ಪಶ್ಚಿಮ ಘಟ್ಟದ ​​ಪ್ರಮುಖ ವನ್ಯಜೀವಿ ತಾಣಗಳಲ್ಲಿ ಒಂದಾಗಿದ್ದು ಹುಲಿ, ಆನೆ, ಕಪ್ಪು ಪ್ಯಾಂಥರ್, ಹಾರ್ನ್ಬ್ ಬಿಲ್ಸ್ ಹೀಗೆ ವಿವಿಧ ಪ್ರಭೇದಗಳ ಪ್ರಾಣಿ ಪಕ್ಷಿಗಳ ನೈಸರ್ಗಿಕ ನೆಲೆಯಾಗಿದೆ. ಇಂತಹ ಪ್ರದೇಶದಲ್ಲಿ ಇದೀಗ ಹೇರಳವಾಗಿ ಕಾಣಸಿಗುವ ಮೊಸಳೆಗಳೂ ಕೂಡ ಪ್ರವಾಸಿಗರ ಪಾಲಿಗೆ ಆಕರ್ಷಣೀಯವಾಗಿವೆ.

ದಾಂಡೇಲಿ ಮೊಸಳೆ ಪಾರ್ಕ್

ಈ ಸರೀಸೃಪಗಳ ವೀಕ್ಷಣೆಗಾಗಿಯೇ ದಾಂಡೇಲಿ ಪಟ್ಟಣದ ದಾಂಡೇಲಪ್ಪ ದೇವಸ್ಥಾನದ ಬಳಿಯ ಕಾಳಿ ನದಿ ತಟದಲ್ಲಿ ಮೊಸಳೆ ಪಾರ್ಕ್ ತೆರೆಯಲಾಗಿದೆ. ಈ ಉದ್ಯಾನವನದಲ್ಲಿ ಮಗ್ಗರ್ ಮೊಸಳೆಗಳು (ಭಾರತೀಯ ಮೊಸಳೆಗಳು) ಕಾಣಸಿಗುತ್ತವೆ. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಅಡಿಯಲ್ಲಿ ಈ ಪಾರ್ಕ್ ಬರುತ್ತದೆ.

ದಾಂಡೇಲಿ ಮೊಸಳೆ ಪಾರ್ಕ್

ಸುಮಾರು ಎರಡು ಎಕರೆ ಜಾಗದಲ್ಲಿ ಈ ಉದ್ಯಾನವನ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಮೊಸಳೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳ ಪ್ರತಿರೂಪಗಳನ್ನು ಸೃಷ್ಟಿಸಲಾಗಿದೆ. ಜೊತೆಗೆ ಇಲ್ಲಿ ಮಕ್ಕಳ ಮೋಜಿಗೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವನ್ಯಜೀವಿ ಅಭಯಾರಣ್ಯದ ಕಾಳಿ ನದಿ ತಟದಲ್ಲಿರುವ ಈ ಉದ್ಯಾನವನದಿಂದಲೇ ನದಿಯಲ್ಲಿರುವ ಮೊಸಳೆಗಳನ್ನು ನೋಡಬಹುದು. ಏಪ್ರಿಲ್​ನಿಂದ ಸೆಪ್ಟೆಂಬರ್ ನಡುವೆ ಮೊಸಳೆಗಳು ನೋಡಲು ಹೆಚ್ಚು ಕಾಣಸಿಗುತ್ತವೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಇದನ್ನೂ ಓದಿ:ವಿಡಿಯೋ: ಅಂಜನಾದ್ರಿ ಮೆಟ್ಟಿಲೋತ್ಸವಕ್ಕೆ ಚಾಲನೆ

ಈ ಮೊಸಳೆಗಳು ನೋಡುವುದಕ್ಕೆ ಎಷ್ಟು ಆಕರ್ಷಕವೋ ಅಷ್ಟೇ ಅಪಾಯಕಾರಿ. ನದಿಗಳಿಗಿಳಿದ ಅದೆಷ್ಟೋ ಜನರ ಮೇಲೆ ದಾಳಿ ಸಹ ಮಾಡಿವೆ. ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಿಗೂ ನುಗ್ಗಿ ಆಗಾಗ ಆತಂಕ ಸೃಷ್ಟಿಸುತ್ತಿವೆ. ನೀರಿಗೆ ಕೈಕಾಲು ತೊಳೆಯಲು ಇಳಿದವರನ್ನು ಹೊತ್ತೊಯ್ದ ಉದಾಹರಣೆ ಇವೆ. ಆದರೆ ಮೊಸಳೆ ಪಾರ್ಕ್​ನಲ್ಲಿ ಈ ಭಯ ಇಲ್ಲ. ಬರುವಂತ ಪ್ರವಾಸಿಗರಿಗೆ ಮೊಸಳೆಯಿಂದ ಯಾವುದೇ ಅಪಾಯವಾಗುವುದಿಲ್ಲ. ಪ್ರವಾಸಿಗರು ಕೂಡ ಜಾಗೃತೆಯಿಂದ ನದಿಗಳಿಗೆ ಇಳಿಯದೇ ದೂರದಿಂದ ನೋಡಬಹುದಾಗಿದೆ.

Last Updated : Jul 18, 2022, 4:33 PM IST

ABOUT THE AUTHOR

...view details