ಕರ್ನಾಟಕ

karnataka

ETV Bharat / state

ಎಲ್ಲ ಕ್ಷೇತ್ರಗಳಲ್ಲಿ ಗೆದ್ದಾಗಿದೆ ಎಂದ್ಮೇಲೆ ಬಿಎಸ್​ವೈ ಯಾಕೆ ಪ್ರಚಾರ ಮಾಡ್ತಿದಾರೆ: ಸಿದ್ದು ಪ್ರಶ್ನೆ - Why BSY campaigning after winning

ಶಿರಸಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ ಎನ್ನುತ್ತಾರೆ. ಹಾಗಾದ್ರೆ ಮತ್ಯಾಕೆ ಚುನಾವಣಾ ಪ್ರಚಾರಕ್ಕಾಗಿ ಒಡಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Nov 25, 2019, 12:51 PM IST

ಶಿರಸಿ: ಸಿಎಂ ಯಡಿಯೂರಪ್ಪ ಉಪಚುನಾವಣೆ ನಡೆಯುತ್ತಿರುವ ಎಲ್ಲ 15 ಕ್ಷೇತ್ರಗಳಲ್ಲಿ ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ ಎನ್ನುತ್ತಾರೆ. ಗೆಲುವನ್ನ ಸಾಧಿಸಿದರೆ ಮತ್ಯಾಕೆ ಚುನಾವಣಾ ಪ್ರಚಾರಕ್ಕಾಗಿ ಒಡಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಗೆದ್ದಾಗಿದೆ ಎಂದ್ಮೇಲೆ ಬಿಎಸ್​ವೈ ಯಾಕೆ ಪ್ರಚಾರ ಮಾಡ್ತಿದಾರೆ- ಸಿದ್ದು ಪ್ರಶ್ನೆ

ಯಲ್ಲಾಪುರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲೂಕಿನ ಕಿರುವತ್ತಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆದ್ದಾಗಿದೆ ಎಂದ ಮೇಲೆ ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿಕೊಂಡು ಬಿಎಸ್​ವೈ ಯಾಕೆ ಒಡಾಡ್ತಿದ್ದಾರೆ. ಚುನಾವಣೆಗಾಗಿ ಯದ್ವಾ ತದ್ವಾ ದುಡ್ಡನ್ನು ಯಾಕೆ ಕೊಡ್ತಿದಾರೆ ಎಂದು ಪ್ರಶ್ನಿಸಿದರು.

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್​ ಪರ ಮತ ಯಾಚಿಸಿದ ಯಡಿಯೂರಪ್ಪ

ಇನ್ನು, ಬಿಜೆಪಿ ಸೇರಲು ಪಕ್ಷಗಳ ಮುಖಂಡರು ಕ್ಯೂನಲ್ಲಿ ನಿಂತಿದ್ದಾರೆ ಎನ್ನುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಸಿದ್ದರಾಮಯ್ಯ ಕಿಡಿಕಾರಿದರು. ಸಂಸದ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸೋಕೆ ಆಗುತ್ತಾ, ಅವನು‌‌ ನಾರ್ಮಲ್ ಆಗಿ ಇರ್ತಾನೋ‌ ಇಲ್ವೊ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ABOUT THE AUTHOR

...view details