ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗರಿಬ್ಬರು ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಮುರುಡೇಶ್ವರ ದೇವಸ್ಥಾನದ ಬಲ ಭಾಗದ ಸಮುದ್ರ ತೀರದಲ್ಲಿ ನಡೆದಿದೆ.
ಮುರುಡೇಶ್ವರದಲ್ಲಿ ಈಜಲು ಹೋದ ಪ್ರವಾಸಿಗರಿಬ್ಬರು ನೀರು ಪಾಲು: ಓರ್ವನ ಶವ ಪತ್ತೆ
ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರವಾಸಿಗರಲ್ಲಿ ಇಬ್ಬರು ಸಮುದ್ರದ ಪಾಲಾಗಿದ್ದಾರೆ. ಒಬ್ಬನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗೆ ಹುಡುಕಾಟ ಮುಂದುವರಿದಿದೆ.
ಹವಾಮಾನ ವೈಪರೀತ್ಯದಿಂದ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದೆಂದು ನಿಷೇಧ ಹೇರಿದ್ದರೂ ಸಹ ಪ್ರವಾಸಕ್ಕಾಗಿ ಬಂದ ನಾಲ್ವರ ಗುಂಪು ದೇವಸ್ಥಾನದ ಬಲಭಾಗದಲ್ಲಿರುವ ಆರ್.ಎನ್.ಎಸ್ ಕಲ್ಯಾಣ ಮಂಟಪದ ಬದಿಯ ಸಮುದ್ರದಲ್ಲಿ ಮೋಜು ಮಸ್ತಿಗೆ ಈಜಲು ತೆರಳಿದ್ದು, ಅಲೆಯ ಹೊಡೆತಕ್ಕೆ 4 ಜನ ಯುವಕರು ಕೊಚ್ಚಿ ಹೋಗಿದ್ದಾರೆ.
ನಾಲ್ವರಲ್ಲಿ ಇಬ್ಬರು ಯುವಕರು ಈಜಿಕೊಂಡು ದಡ ಸೇರಿ ಜೀವ ಉಳಿಸಿಕೊಂಡ್ದಾರೆ. ಇನ್ನಿಬ್ಬರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವನ ಮೃತದೇಹ ಅಲೆಯ ಹೊಡೆತಕ್ಕೆ ಸಮುದ್ರದ ದಡಕ್ಕೆ ಬಂದು ಬದ್ದಿದೆ. ಇನ್ನೋರ್ವನ ಮೃತ ದೇಹ ಪತ್ತೆಯಾಗಿಲ್ಲ, ಹುಡುಕಾಟ ಮುಂದುವರಿದಿದೆ. ನಿನ್ನೆ ಪ್ರವಾಸಕ್ಕೆಂದು ಬಂದಿದ್ದ ಈ ಯುವಕರು ಶಿವಮೊಗ್ಗದ ಮಾಸೂರು ರೋಡ್ ಶಿಕಾರಿಪುರ ನಿವಾಸಿಗಳು ಎಂದು ತಿಳಿದು ಬಂದಿದೆ.