ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುವ ಸಾವಿರಾರು ಕಾಂಡೋಮ್ಗಳನ್ನು ರಸ್ತೆ ಬದಿಯಲ್ಲಿಯೇ ಸುಟ್ಟು ಹಾಕಿರುವ ಘಟನೆ ಹಣಕೋಣ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಈ ಅವಧಿ ಮೀರದಿರುವ ಕಾಂಡೋಮ್ಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಬೆಂಕಿ ಹಚ್ಚಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಇವನ್ನು ಯಾವ ಆಸ್ಪತ್ರೆಯಿಂದ ತಂದು ಇಲ್ಲಿ ಬೆಂಕಿ ಹಾಕಲಾಗಿದೆ ಎಂಬುದು ತಿಳಿದು ಬರಬೇಕಿದೆ.
ಕಾರವಾರದ ರಸ್ತೆ ಬದಿ ಸಾವಿರಾರು ಅವಧಿ ಮೀರದ ಕಾಂಡೋಮ್ಗಳಿಗೆ ಬೆಂಕಿ! ಕಾಂಡೋಮ್ಗಳನ್ನು ಈ ರೀತಿ ರಸ್ತೆ ಬದಿಯಲ್ಲಿ ಬೆಂಕಿ ಹಚ್ಚುವುದು ಸರಿಯಲ್ಲ, ಬಹಳಷ್ಟು ಕಾಂಡೋಮ್ಗಳು ರಸ್ತೆ ಬದಿಯಲ್ಲಿಯೇ ಬಿದ್ದಿವೆ. ಇವುಗಳನ್ನು ಸಣ್ಣ ಮಕ್ಕಳು ಬಲೂನೆಂದು ತಿಳಿದು ಆಟಕ್ಕೆ ಬಳಸುವ ಸಾಧ್ಯತೆ ಇದೆ. ಇದು ಸ್ಥಳೀಯರಿಗೆ ಇರುಸು ಮುರುಸು ಉಂಟು ಮಾಡುವ ಘಟನೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ