ಕರ್ನಾಟಕ

karnataka

ETV Bharat / state

ಬಾಲಕನ ಬಾಳು ಕತ್ತಲಾಗಿಸಿದ ಆ ಘಟನೆ... ಬೇಕಿದೆ ನೆರವಿನ ಹಸ್ತ - kannadanews

ಬ್ರಿಯಾನ್ ಟೆಲಿಸ್ ಎಂಬ ಬಹುಮುಖ ಪ್ರತಿಭೆಯುಳ್ಳ  ಈ ಬಾಲಕ ಅಪಘಾತದಲ್ಲಿ ಎಡಗಾಲಿನ ಪಾದ ಕಳೆದುಕೊಂಡು ಹಾಸಿ ಹಿಡಿದಿದ್ದಾನೆ. ಈತನಿಗೆ  ಕೃತಕ ಕಾಲು ಹಾಕಿಸಲು ಮತ್ತು  ಶಿಕ್ಷಣಕ್ಕೆ ಸಹಾಯಸ್ತ ನೀಡುವಂತೆ ಪೋಷಕರು ಕೇಳಿಕೊಂಡಿದ್ದಾರೆ.

ಬಾಲಕನಿಗೆ ಬೇಕಿದೆ ನೆರವಿನ ಹಸ್ತ

By

Published : Jun 18, 2019, 1:15 PM IST


ಕಾರವಾರ: ಆತ ಆಟ, ಪಾಠದಲ್ಲಿ ಸದಾ ಮುಂದಿರುವ ಬಾಲಕ. ಜತೆಗೆ ನೃತ್ಯ, ಸಂಗೀತವೂ ಆತನ ಉಸಿರು. ಆದರೆ, ಎರಡು ತಿಂಗಳ ಹಿಂದೆ ನಡೆದ ಘಟನೆಯೊಂದು ಆತನ ಜೀವನವನ್ನೇ ಕತ್ತಲಾಗಿಸಿದ್ದು, ಬಡ ತಂದೆತಾಯಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಬಾಲಕನಿಗೆ ಬೇಕಿದೆ ನೆರವಿನ ಹಸ್ತ

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಾಗದ ಬಾಲಕ ಬ್ರಿಯಾನ್ ಟೆಲಿಸ್ ಬಹುಮುಖ ಪ್ರತಿಭೆ. ಓದಿನಲ್ಲಿ ಮತ್ತು ಇತರ ಚಟುವಟಿಕೆಯಲ್ಲಿ ಸದಾ ಮುಂದು. ಈತ ಒಂಬತ್ತನೇ ತರಗತಿಯಲ್ಲಿ ಶೇ. 80 ರಷ್ಟು ಅಂಕಗಳಿಸಿದ್ದ. ಆದರೆ, ಅಂದೊಂದು ದಿನ ಸ್ನೇಹಿತರೊಂದಿಗೆ ಆಟವಾಡಲು ತೆರಳಿದಾಗ ಅಪಘಾತದಲ್ಲಿ ಎಡಗಾಲಿನ ಪಾದ ಛಿದ್ರವಾಗಿತ್ತು. ಕೊನೆಗೆ ಮಂಗಳೂರಿಗೆ ತೆರಳಿದಾಗ ವೈದ್ಯರ ಸೂಚನೆಯಂತೆ ಪಾದವನ್ನೇ ತೆಗೆಯಲಾಗಿದೆ. ಹೀಗಾಗಿ ಆತ ಹಾಸಿಗೆ ಹಿಡಿದಿದ್ದಾನೆ. ಎದ್ದು ಕೂರಲು ಕೂಡ ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೋಗಲಾಗದೇ ಕುಗ್ಗಿರುವ ಈತ, ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ. ಮಗನ ಸ್ಥಿತಿ ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಬಾಲಕನ ತಂದೆ ಸಿವರಿನ್ ಟೆಲಿಸ್.

ಈ ನಡುವೆ ಮಗನ ಆರೈಕೆ ಮಾಡಲು ತಾಯಿ ಒದ್ದಾಡುತ್ತಿದ್ದಾರೆ. ಅತ್ತ ಬಾಲಕನ ತಂದೆಗೆ ಕೆಲಸವೂ ಇಲ್ಲ. ಹಾಗಾಗಿ ತಾನೇ ಕೆಲಸ ಮಾಡಿ ಮನೆ ನಡೆಸಬೇಕಿದೆ. ಮಗನ ಸ್ಥಿತಿ ಹೀಗಾಗಿದ್ದು, ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುವುದು ತಾಯಿಯ ಅಳಲು. ಬಹುಮುಖ ಪ್ರತಿಭೆಗೆ ಆತ್ಮಸ್ಥೈರ್ಯದ ಜತೆಗೆ ಬಡತನದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು, ಇನ್ನು ಕೃತಕ ಕಾಲು ಮತ್ತು ಮಗನ ಮುಂದಿನ ಶಿಕ್ಷಣಕ್ಕೆ ಸಹಾಯ ಬೇಕಿದೆ. ನೆರವು ನೀಡಲು ಇಚ್ಚಿಸುವವರು ಕಾರವಾರ ತಾಲೂಕಿನ ಹಳಗಾದ ಕೆನರಾ ಬ್ಯಾಂಕ್ ಶಾಖೆಯ ತಾಯಿ ಪ್ರೀತಿ ಸಿವರಿನ್ ಟೆಲಿಸ್ ಹೆಸರಿನಲ್ಲಿರುವ ಖಾತೆ ಸಂಖ್ಯೆ 0674101012313, ಐಎಫ್ಎಸ್ಸಿ ಸಂ CNRB0000674 ಹಣ ಸಂದಾಯ ಮಾಡಬಹುದು. ಅವರನ್ನು ಮೊ. ಸಂ 9481914971 ಗೆ ಸಂಪರ್ಕಿಸಬಹುದು.

For All Latest Updates

ABOUT THE AUTHOR

...view details