ಶಿರಸಿ :ನಾಡಬಾಂಬ್ ಸ್ಫೋಟಗೊಂಡು ವ್ಯಕ್ತಿಯೋರ್ವನ ಬಾಯಿಗೆ ಗಂಭೀರ ಸ್ವರೂಪದ ಗಾಯವಾದ ಘಟನೆ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಜರುಗಿದೆ.
ಶಿರಸಿಯಲ್ಲಿ ನಾಡಬಾಂಬ್ ಸ್ಫೋಟ, ವ್ಯಕ್ತಿಗೆ ಗಾಯ - Sirsi news
ಮನೆಯ ಪಕ್ಕದಲ್ಲಿನ ಪಂಪ್‍ಸೆಟ್ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದ್ದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ವ್ಯಕ್ತಿಗೆ ಗಾಯ
ಕುಬೇರಪ್ಪ ಲೋಕಪ್ಪ ಲಮಾಣಿ (32) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಘಟನೆಯಿಂದ ಕುಬೇರಪ್ಪನ ಬಾಯಿಗೆ ಗಾಯವಾಗಿದ್ದು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ನಾಡ ಬಾಂಬ್ ಅಲ್ಲಿಗೆ ಹೇಗೆ ಬಂತು?, ಹೇಗೆ ಸ್ಫೋಟವಾಯಿತು? ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.