ಕರ್ನಾಟಕ

karnataka

ಹೌಡಿಯಲ್ಲಿ ಮೋದಿ-ಟ್ರಂಪ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ನಮ್ಮವ ಕಣ್ರೀ

By

Published : Sep 23, 2019, 7:15 PM IST

Updated : Sep 23, 2019, 7:37 PM IST

ನಿನ್ನೆ ಅಮೆರಿಕಾದಲ್ಲಿ ನಡೆದ ಮೋದಿಯವರ ಹೌಡಿ ಕಾರ್ಯಕ್ರಮದಲ್ಲಿ ಶಿರಸಿಯ ಸಿದ್ದಾಪುರ ಮೂಲದ ಬಾಲಕ ಸಾತ್ವಿಕ್​​ ಹೆಗಡೆ ಭಾಗವಹಿಸಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಆ ಫೋಟೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ.

ಸಾತ್ವಿಕ್​ ಹೆಗಡೆ

ಶಿರಸಿ: ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ಭಾನುವಾರ ನಡೆದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಜೊತೆಗೆ ಜಿಲ್ಲೆಯ ಕುವರ ಸಾತ್ವಿಕ್ ಹೆಗಡೆ ಎಂಬ ಹುಡುಗನೊಬ್ಬ ಸೆಲ್ಪಿ ಕ್ಲಿಕ್ಕಿಸಿದ್ದು ಜಗತ್ತಿನಾದ್ಯಂತ ವೈರಲಾಗಿದೆ.

ಸಾತ್ವಿಕ್ ಹೆಗಡೆ

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೋದಿಯವರನ್ನ ಸ್ವಾಗತ ಮಾಡೋ ಕಾರ್ಯಕ್ರಮದಲ್ಲಿ ಸಾತ್ವಿಕ್ ಹೆಗಡೆ ಭಾಗವಹಿಸಿದ್ದು, ಅಲ್ಲಿ ಸೂರ್ಯ ನಮಸ್ಕಾರ ಪ್ರದರ್ಶನವನ್ನ ಕೂಡ ನೀಡಿದ್ದ. ನಂತರ ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ. ಅಮೆರಿಕಾದ ದಿ ವೈಟ್ ಹೌಸ್ ಅಧಿಕೃತ ಟ್ವಿಟರ್ ಖಾತೆ ಈ ಪೋಟೋವನ್ನು ಹಂಚಿಕೊಂಡಿದ್ದು, ಈಗ ಅದು ಎಲ್ಲೆಡೆ ವೈರಲ್ ಆಗಿದೆ. ಟೆಕ್ಸಾಸ್​ನ ಲೂಯಿಸ್ ಡಿ ಬ್ರಾಂಡಿಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರೋ 13 ವರ್ಷ ವಯಸ್ಸಿನ ಸಾತ್ವಿಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್​ನ ಮೇಧಾ ಮತ್ತು ಪ್ರಭಾಕರ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ.

ಮೋದಿ ಟ್ರಂಪ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸಾತ್ವಿಕ್​​ ಹೆಗಡೆ

ಈ ದಂಪತಿ ಕಳೆದ 17 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದು, ರಜೆಯ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಕರ್ಕಿಸವಲ್​ಗೆ ಬಂದು ಕಾಲ ಕಳೆದು ಹೋಗುತ್ತಾರೆ. ಸಾತ್ವಿಕ್ ಅಜ್ಜ ಕೂಡ ನಿವೃತ್ತ ಮುಖ್ಯಾಧ್ಯಾಪಕರಾಗಿದ್ದು, ತಾಯಿ ಕೂಡ ಅಮೆರಿಕಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

Last Updated : Sep 23, 2019, 7:37 PM IST

ABOUT THE AUTHOR

...view details