ಕರ್ನಾಟಕ

karnataka

ETV Bharat / state

ಬಾಸುಂಡೆ ಬರುವ ರೀತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ!

ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಬ್ಬರಿಗೆ ಬಾಸುಂಡೆ ಬರುವ ರೀತಿ ಹೊಡೆದು ಬಳಿಕ ಕ್ಷಮೆ ಕೇಳಿದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

Teacher beat to student in Karwar, Teacher sorry ask to student in Karwar, Karwar news, Uttara Kannada news, ಕಾರವಾದಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕಿ ದರ್ಪ, ಕಾರವಾದಲ್ಲಿ ವಿದ್ಯಾರ್ಥಿಗೆ ಕ್ಷಮೆ ಕೇಳಿದ ಶಿಕ್ಷಕಿ, ಬಾಸುಂಡೆ ಬರುವ ರಿತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ, ಕಾರವಾರ ಸುದ್ದಿ,
ಬಾಸುಂಡೆ ಬರುವ ರಿತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ

By

Published : Jan 31, 2022, 7:23 AM IST

Updated : Jan 31, 2022, 5:59 PM IST

ಕಾರವಾರ:ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವ ರೀತಿ ಶಿಕ್ಷಕಿಯೊಬ್ಬರು ಹೊಡೆದು ದಂಡಿಸಿದ ಘಟನೆ ಹೊನ್ನಾವರ ಪಟ್ಟಣದ ಸರ್ಕಾರಿ‌ ಶಾಲೆಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ಬಾಸುಂಡೆ ಬರುವ ರಿತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ

ಕಲ್ಪನಾ ಹೆಗಡೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕಿ. ಶಾಲೆಯಲ್ಲಿ ನಡೆದ ಸಣ್ಣ ಪ್ರಮಾದವೊಂದಕ್ಕೆ ಕುಪಿತರಾದ ಶಿಕ್ಷಕಿ ಕಲ್ಪನಾ ಹೆಗಡೆ 6 ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವ ರೀತಿ ಹೊಡೆದು ಗಾಯಗೊಳಿಸಿದ್ದಾರೆ.

ಓದಿ:ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: ಸ್ಥಳದಲ್ಲೇ ಐವರು ಸಾವು!

ಇನ್ನು ವಿಷಯ ಪಾಲಕರಿಗೆ ತಿಳಿಯುತ್ತಿದ್ದಂತೆ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪಾಲಕರ ಬಳಿ ಕ್ಷಮೆಯಾಚಿಸಿದ್ದು ಪ್ರಕರಣ ತಣ್ಣಗಾಗಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ, ಪ್ರಕರಣ ತಾಲೂಕಿನಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಶಿಕ್ಷಕಿಯ ವರ್ತನೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 5:59 PM IST

ABOUT THE AUTHOR

...view details