ಕರ್ನಾಟಕ

karnataka

ETV Bharat / state

ತೌಕ್ತೆ ತಣ್ಣಗಾದರೂ ನಿಲ್ಲದ ಅಲೆಗಳ ಆರ್ಭಟ : ಗೋಕರ್ಣದಲ್ಲಿ ಕಡಲ್ಕೊರೆತ

ಈಗಾಗಲೇ ಗಾಳಿ-ಮಳೆಯ ರಭಸಕ್ಕೆ ಬೀಚ್ ಬಳಿಯಿದ್ದ ಹೋಂ ಸ್ಟೇ, ರೆಸಾರ್ಟ್‌, ಟೆಂಟ್‌ಗಳು ಹಾನಿಗೊಳಗಾಗಿವೆ. ಇದೀಗ ಬೀಚ್​ನ ಸುತ್ತ ಅಲ್ಲಲ್ಲಿ ಕಡಲ್ಕೊರೆತ ಹಾಗೂ ಗಾಳಿಯಿಂದ ಹಲವು ಮರಗಳು ಧರೆಗುರುಳಿತ್ತಿವೆ..

gokarna
ತೌಕ್ತೆ ತಣ್ಣಗಾದರೂ ನಿಲ್ಲದ ಅಲೆಗಳ ಆರ್ಭಟ: ಗೋಕರ್ಣದಲ್ಲಿ ಕಡಲ್ಕೊರೆತ

By

Published : May 18, 2021, 12:46 PM IST

ಕಾರವಾರ :ಕರಾವಳಿಯಲ್ಲಿ ಎರಡು ದಿನಗಳ ಕಾಲ ಅಬ್ಬರಿಸಿದ್ದ ತೌಕ್ತೆ ಚಂಡಮಾರುತ ಸದ್ಯ ತಣ್ಣಗಾಗಿದೆ. ಆದರೆ, ಗೋಕರ್ಣದಲ್ಲಿ ಮಾತ್ರ ಅಲೆಗಳ ಅಬ್ಬರ ಜೋರಾಗಿದ್ದು, ಕಡಲತೀರದ ಪ್ರದೇಶ ಕೊಚ್ಚಿ ಹೋಗುತ್ತಿದೆ.

ತೌಕ್ತೆ ತಣ್ಣಗಾದರೂ ನಿಲ್ಲದ ಅಲೆಗಳ ಆರ್ಭಟ : ಗೋಕರ್ಣದಲ್ಲಿ ಕಡಲ್ಕೊರೆತ

ಮಳೆ, ಗಾಳಿ ಕಡಿಮೆಯಾದರೂ ಕೂಡ ಗೋಕರ್ಣದ ಓಂ ಬೀಚ್, ಪ್ಯಾರ್‌ಡೈಸ್ ಬೀಚ್, ಕೂಡ್ಲೆ ಬೀಚ್ ಹಾಗೂ ಮುಖ್ಯ ಬೀಚ್‌‌ನಲ್ಲಿ ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಇದರಿಂದಾಗಿ ಕಡಲತೀರದ ಪ್ರದೇಶ ಕೊಚ್ಚಿ ಹೋಗಿ ಸಮುದ್ರಪಾಲಾಗುತ್ತಿರುವುದು ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದೆ.

ಈಗಾಗಲೇ ಗಾಳಿ-ಮಳೆಯ ರಭಸಕ್ಕೆ ಬೀಚ್ ಬಳಿಯಿದ್ದ ಹೋಂ ಸ್ಟೇ, ರೆಸಾರ್ಟ್‌, ಟೆಂಟ್‌ಗಳು ಹಾನಿಗೊಳಗಾಗಿವೆ. ಇದೀಗ ಬೀಚ್​ನ ಸುತ್ತ ಅಲ್ಲಲ್ಲಿ ಕಡಲ್ಕೊರೆತ ಹಾಗೂ ಗಾಳಿಯಿಂದ ಹಲವು ಮರಗಳು ಧರೆಗುರುಳಿತ್ತಿವೆ.

ಓದಿ:ವಿಡಿಯೋ: ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ತುಟಿಗೆ ಮುತ್ತಿಕ್ಕಿದ ಭೂಪ!

ABOUT THE AUTHOR

...view details