ಕರ್ನಾಟಕ

karnataka

ETV Bharat / state

ಕಾರವಾರ: ಸಂಶಯಾಸ್ಪದ ಸ್ಪಿರಿಟ್ ಲಾರಿ ಜಪ್ತಿ: ಶಾಸಕ ಸತೀಶ್ ಸೈಲ್-ಅಬಕಾರಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ - ​ ETV Bharat Karnataka

ಗಡಿಭಾಗ ಮಾಜಾಳಿ ಚೆಕ್‌ಪೋಸ್ಟ್​ನಲ್ಲಿ ಸಂಶಯಾಸ್ಪದ ಸ್ಪಿರಿಟ್ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು.

ಶಾಸಕ ಸತೀಶ್ ಸೈಲ್ - ಅಬಕಾರಿ ಅಧಿಕಾರಿಗಳ ನಡುವೆ ಮಾತು
ಶಾಸಕ ಸತೀಶ್ ಸೈಲ್ - ಅಬಕಾರಿ ಅಧಿಕಾರಿಗಳ ನಡುವೆ ಮಾತು

By ETV Bharat Karnataka Team

Published : Nov 7, 2023, 9:19 AM IST

ಶಾಸಕ ಸತೀಶ್ ಸೈಲ್ - ಅಬಕಾರಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

ಕಾರವಾರ(ಉತ್ತರ ಕನ್ನಡ):ಕಳೆದ ಎರಡು ದಿನಗಳ ಹಿಂದೆ ಸಂಶಯಾಸ್ಪದ ಮದ್ಯದ ಲಾರಿಯೊಂದನ್ನು ಜಪ್ತಿ ಮಾಡಿದ್ದರೂ ಕೂಡಾ ಪ್ರಕರಣ ದಾಖಲಿಸದ ಅಬಕಾರಿ ಅಧಿಕಾರಿಗಳೊಂದಿಗೆ ಶಾಸಕ ಸತೀಶ್ ಸೈಲ್ ಮಾತಿನ ಚಕಮಕಿ ನಡೆಸಿದ ಘಟನೆ ಸೋಮವಾರ ನಡೆದಿದೆ.

ಬೀದರ್‌ನಿಂದ ಗೋವಾದ ಕಾಣಕೋಣದತ್ತ ತೆರಳುತ್ತಿದ್ದ ಗ್ಲೋಬಲ್ ಕೆಮಿಕಲ್ಸ್ ಹೆಸರಿನಲ್ಲಿ 30 ಸಾವಿರ ಲೀಟರ್ ಸ್ಪಿರಿಟ್ ತುಂಬಿದ್ದ ಲಾರಿಯೊಂದನ್ನು ನ.4ರಂದು ರಾಜ್ಯದ ಗಡಿಭಾಗ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದರು. ಕಾಣಕೋಣದ ಕಾರ್ಖಾನೆ ಬಳಕೆಗೆ ಎಂದು ದಾಖಲೆ ತೋರಿಸಿ ಕೊಂಡೊಯ್ಯುತ್ತಿದ್ದರು. ಆದರೆ ಅನುಮಾನಗೊಂಡ ಅಬಕಾರಿ ಇಲಾಖೆ ಅಧಿಕಾರಿಗಳು ಉನ್ನತಾಧಿಕಾರಿಗಳಿಗೂ ಮಾಹಿತಿ ನೀಡಿ ಲಾರಿ ಜಪ್ತಿಪಡಿಸಿಕೊಂಡಿದ್ದರು.

ಅಲ್ಲದೇ ಸ್ಪಿರಿಟ್ ಅಸಲಿಯತ್ತಿನ ಪರೀಕ್ಷೆಗಾಗಿ ಧಾರವಾಡ ಹಾಗೂ ಬೆಂಗಳೂರು ಪ್ರಯೋಗಾಲಯದ ಪರೀಕ್ಷೆಗೂ ಕಳುಹಿಸಿದ್ದರು. ವರದಿ ಬರುವುದು ಇನ್ನೂ ಬಾಕಿ ಇದ್ದುದರಿಂದ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಟ್ಯಾಂಕರ್ ಹಾಗು ಚಾಲಕರನ್ನು ಬಿಡುವಂತೆ, ಇಲ್ಲದಿದ್ದರೆ ಪ್ರಕರಣ ದಾಖಲಿಸಿಕೊಳ್ಳುವಂತೆ ಸತೀಶ್ ಸೈಲ್ ಅವರು ಮಾಜಾಳಿಯ ಚೆಕ್‌ಪೋಸ್ಟ್​ಗೆ ಭೇಟಿ ನೀಡಿ ಅಬಕಾರಿ ಅಧಿಕಾರಿ ಸದಾಶಿವ ಕೊರ್ತಿಯವರೊಂದಿಗೆ ಮಾತಿಗಿಳಿದಿದ್ದರು.

ಸ್ಪಿರಿಟ್‌ನ ವರದಿ ಬಾರದೇ ಟ್ಯಾಂಕರ್ ಅಥವಾ ಚಾಲಕರನ್ನು ಬಿಡುವಂತಿಲ್ಲ. ಪ್ರಕರಣವನ್ನೂ ದಾಖಲಿಸಿಕೊಳ್ಳುವಂತಿಲ್ಲ. ವರದಿ ಬರಲು ಬಿಡಿ ಎಂದು ಅಧಿಕಾರಿ ತಿಳಿಸಿದರು. ಇದಕ್ಕೆ ಶಾಸಕ ಸೈಲ್ ಗರಂ ಆಗಿ ಮಾತಿನ ಚಕಮಕಿ ನಡೆಸಿದರು. ಕೊನೆಗೆ ಅಧಿಕಾರಿ, ಭಾನುವಾರವಾದ ಕಾರಣ ವರದಿ ಬರಲು ತಡವಾಗಿದೆ. ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಶಾಸಕರೂ ಕೂಡ ಸಮ್ಮತಿಸಿ ವಿನಾಃ ಕಾರಣ ಜನರಿಗೆ ತೊಂದರೆ ನೀಡಬೇಡಿ ಎಂದು ತಿಳಿಸಿದರು.

ಆಕ್ರಮ ಮದ್ಯ ಸಾಗಣೆ-ಲಾರಿ ವಶ: ಅ.22 ರಂದು ಗೋವಾದಿಂದ ತೆಲಂಗಾಣಕ್ಕೆ ದುಬಾರಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಬೆಳಗಾವಿ ತಾಲೂಕಿನ ಪೀರನವಾಡಿ ಕ್ರಾಸ್‌ ಹತ್ತಿರ ಅಬಕಾರಿ ಅಧಿಕಾರಿಗಳು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. 43 ಲಕ್ಷ ರೂ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದರು. ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಿಗ್ಗೆ 3.30ರ ಸುಮಾರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ಚಾಲಕ ಕಾಲ್ಕಿತ್ತಿದ್ದನು. ಲಾರಿ ತಪಾಸಣೆ ನಡೆಸಿದಾಗ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವುದು ಖಚಿತವಾಗಿತ್ತು. 43,93,700 ರೂ. ಮೌಲ್ಯದ ಮದ್ಯ ಹಾಗೂ ಸಾಗಣೆಗೆ ಉಪಯೋಗಿಸಿದ್ದ 20 ಲಕ್ಷ ರೂ ಮೌಲ್ಯದ ಲಾರಿ ಜಪ್ತಿ ಮಾಡಲಾಗಿತ್ತು.

ಲಾರಿಯಲ್ಲಿ 21 ವಿವಿಧ ಕಂಪನಿಯ ದುಬಾರಿ ಬೆಲೆಯ ಮದ್ಯದ 250 ಬಾಕ್ಸ್​ಗಳನ್ನು ಮೊದಲಿಗೆ ಇಟ್ಟಿದ್ದಾರೆ. ಈ ಬಾಕ್ಸ್‌ಗಳ ಮೇಲೆ ಯಾರಿಗೂ ಅನುಮಾನ‌ ಬಾರದಂತೆ ಖಾಲಿ ರಟ್ಟು ಮತ್ತು ಪೇಪರ್‌ಗಳನ್ನು ಹೊಂದಿಸಿಟ್ಟಿದ್ದರು.

ಇದನ್ನೂ ಓದಿ:ನ.10 ರಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ; ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ABOUT THE AUTHOR

...view details