ಕರ್ನಾಟಕ

karnataka

ETV Bharat / state

ಜಾನಪದ ಕೋಗಿಲೆ ಸುಕ್ರಜ್ಜಿ ಚೇತರಿಕೆ... ಆಸ್ಪತ್ರೆಯಿಂದ ಮನೆಗೆ ಮರಳಿದ ಪದ್ಮಶ್ರೀ ಪುರಸ್ಕೃತೆ - ಸುಕ್ರಿ ಬೊಮ್ಮ ಗೌಡ

ಜಾನಪದ ಕೋಗಿಲೆ, ಹಾಡು ಹಕ್ಕಿ ಎಂದೇ ಖ್ಯಾತಿ ಪಡೆದಿರುವ ಸುಕ್ರಿ ಬೊಮ್ಮಗೌಡ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಇಂದು ಮನೆಗೆ ಮರಳಿದ್ದಾರೆ.

ಜಾನಪದ ಕೋಗಿಲೆ ಸುಕ್ರಜ್ಜಿ ಗುಣಮುಖ... ಆಸ್ಪತ್ರೆಯಿಂದ ಮನೆಗೆ ಮರಳಿದ ಪದ್ಮಶ್ರೀ ಪುರಸ್ಕೃತೆ

By

Published : Sep 17, 2019, 10:03 PM IST

ಕಾರವಾರ: ಉಸಿರಾಟದ ಸಮಸ್ಯೆಯಿಂದ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾನಪದ ಕೋಗಿಲೆ, ಪದ್ಮಶ್ರೀ ಪುರಷ್ಕೃತೆ ಸುಕ್ರಜ್ಜಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಇಂದು ಮನೆಗೆ ಮರಳಿದ್ದಾರೆ.

ಜಾನಪದ ಕೋಗಿಲೆ ಸುಕ್ರಜ್ಜಿ ಗುಣಮುಖ... ಆಸ್ಪತ್ರೆಯಿಂದ ಮನೆಗೆ ಮರಳಿದ ಪದ್ಮಶ್ರೀ ಪುರಸ್ಕೃತೆ

ಉಸಿರಾಟದ ಸಮಸ್ಯೆಯಿಂದಾಗಿ ಸೆ.12 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸುಕ್ರಜ್ಜಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶ್ವಾಸಕೋಶದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ಕಾರಣ ಉಸಿರಾಟದ ತೊಂದರೆಯಾಗಿ ಎರಡನೇ ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಇದೀಗ ಸುಕ್ರಜ್ಜಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಅಲ್ಲದೆ ತಿಂಗಳಿಗೊಮ್ಮೆ ಬಂದು ತಪಾಸಣೆಗೆ ಒಳಪಡಿವಂತೆ ಸಲಹೆ ನೀಡಲಾಗಿದೆ. ಅಲ್ಲದೆ, ದಿನ ನಿತ್ಯದ ಔಷಧಿಗಳನ್ನು ಕೊಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲು ಆಸ್ಪತ್ರೆಗೆ ಆಗಮಿಸಿದ್ದ ಶಾಸಕಿ ರೂಪಾಲಿ ನಾಯ್ಕ ಅವರು ಸುಕ್ರಜ್ಜಿಯ ಆರೋಗ್ಯ ವಿಚಾರಿಸಿದರು.

ABOUT THE AUTHOR

...view details