ಶಿರಸಿ/ಹುಣಸೂರು:ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಯಲ್ಲಾಪುರ, ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಹ ಮುಕ್ತಾಯಗೊಂಡಿದೆ. ಕ್ಷೇತ್ರಕ್ಕೆ ಆಯ್ಕೆ ಬಯಸಿ ಇಲ್ಲಿಯವರೆಗೆ ಇಷ್ಟೊಂದು ಮೇದುವಾರಿಕೆ ಸಲ್ಲಿಕೆಯಾಗಿವೆ.
ಮಿನಿ ಸಮರ: ಹುಣಸೂರು, ಯಲ್ಲಾಪೂರ ಕ್ಷೇತ್ರದಲ್ಲಿ ಇಷ್ಟು ನಾಮಪತ್ರ ಸಲ್ಲಿಕೆ! - ರಾಜ್ಯ ಉಪಚುನಾವಣೆ
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಯಲ್ಲಾಪೂರ, ಹುಣಸೂರು ಕ್ಷೇತ್ರದಿಂದ ಇಷ್ಟೊಂದು ಉಮೇದುವಾರಿಕೆ ಸಲ್ಲಿಕೆಯಾಗಿವೆ.
ಯಲ್ಲಾಪುರ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್, ಕಾಂಗ್ರೆಸ್ನಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜೆಡಿಎಸ್ನಿಂದ ಚೈತ್ರಾ ಗೌಡ, ಉತ್ತಮ ಪ್ರಜಾಕೀಯ ಪಕ್ಷದಿಂದ ಸುನೀಲ್ ಪವಾರ್,ಕರ್ನಾಟಕ ರಾಷ್ಟ್ರ ಸಮಿತಿಯಿಂದ ಜೈತುನುಬಿ ಜಗಳೂರು ಹಾಗೂ ಪಕ್ಷೇತರರಾಗಿ ಮಹೇಶ ಹೆಗಡೆ, ಲಕ್ಷ್ಮಣ ಬನ್ಸೋಡೆ, ಮಂಜುನಾಥ ಶಂಕ್ರಪ್ಪ, ಅಮ್ಮಣ್ಣ ನಾಯಕ, ಚಿದಾನಂದ ಹರಿಜನ, ನಾಗೇಶ ಭೋವಿವಡ್ಡರ್ ಸೇರಿದಂತೆ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
11 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮೂರು ದಿನಗಳ ಹಿಂದೆಯೇ ನಾಮಪತ್ರ ಸಲ್ಲಿಸಿದ್ದರೂ ಸಣ್ಣ ದೋಷ ಇರುವುದರಿಂದ ಕೊನೆಯ ದಿನ ಮತ್ತೆರಡು ನಾಮಪತ್ರ ಸಲ್ಲಿದರು. ಮಂಗಳವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು , ನಾಮಪತ್ರ ಹಿಂಪಡೆಯಲು ನ.21 ಕೊನೆಯ ದಿನವಾಗಿದೆ. ಡಿ.5 ರಂದು ಚುನಾವಣೆ ನಡೆಯಲಿದ್ದು, 9 ಕ್ಕೆ ಫಲಿತಾಂಶ ಹೊರಬೀಳಲಿದೆ.
ಹುಣಸೂರು
ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ. ಅನರ್ಹ ಶಾಸಕ ಹೆಚ್.ವಿಶ್ವನಾಥ್, ಕಾಂಗ್ರೆಸ್ನಿಂದ ಹೆಚ್.ಪಿ.ಮಂಜುನಾಥ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಶಬ್ಬೀರ್ ಅಹಮದ್ ಖಾನ್, ಸತ್ಯನಾರಾಯಣ, ರೇವಣ್ಣ, ಉಮೇಶ, ಪ್ರೇಮಕುಮಾರ ವಿ.ವಿ., ಸುಬ್ಬಯ್ಯ, ವೆಂಕಟೇಶ್ ಡಿ. ನಾಯಕ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಎನ್. ಪುಟ್ಟನಂಜಯ್ಯ, ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಇಮ್ತಿಯಾಜ್ ಅಹಮದ್, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಅಡಗೂರು ಹೆಚ್.ವಿಶ್ವನಾಥ್, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಮಜಾಜ್ ಅಹಮದ್, ಕರ್ನಾಟಕ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಎಸ್.ಜಗದೀಶ್, ಜಾತ್ಯಾತೀತ ಜನತಾ ದಳದಿಂದ ಸೋಮಶೇಖರ ನಾಮಪತ್ರ ಸಲ್ಲಿಸಿರುತ್ತಾರೆ
ಒಟ್ಟಾರೆಯಾಗಿ 21 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿರುತ್ತದೆ ಎಂದು ಹುಣಸೂರು ವಿಧಾನಸಭಾ ಉಪಚುನಾವಣಾಧಿಕಾರಿ ತಿಳಿಸಿದ್ದಾರೆ.