ಕಾರವಾರ (ಉತ್ತರ ಕನ್ನಡ):ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಬಹುತೇಕ ಹಳೆ ಅಭ್ಯರ್ಥಿಗಳೇ ಕಣದಲ್ಲಿದ್ದು, ಬಹುತೇಕ ಎಲ್ಲ ಪ್ರಮುಖರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಆಸ್ತಿ ಹೆಚ್ಚಾಗಿದೆ. ಹೌದು, ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್ನಿಂದ ಈ ಮಾಹಿತಿ ಬಹಿರಂಗವಾಗಿದೆ.
299.53 ಕೋಟಿ ಆಸ್ತಿಯ ಒಡೆಯ ಆರ್.ವಿ.ದೇಶಪಾಂಡೆ:ಹಳಿಯಾಳ-ಜೋಯಿಡಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ವಿ.ದೇಶಪಾಂಡೆ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಘೋಷಣಾ ಪತ್ರದಲ್ಲಿ ತಮ್ಮ ಕುಟುಂಬದ ಆಸ್ತಿ ಒಟ್ಟು 299,53 ಕೋಟಿ ಆಸ್ತಿ ಹೊಂದಿದ್ದಾರೆ. ಆರ್.ವಿ.ದೇಶಪಾಂಡೆಗಿಂತ ಪತ್ನಿ ರಾಧಾ ದೇಶಪಾಂಡೆ ಹೆಚ್ಚು ಆಸ್ತಿ ಹೊಂದಿದ್ದು ಅವರ ಆಸ್ತಿ ಮೌಲ್ಯ 253,66,39,532 ಇದೆ. ದೇಶಪಾಂಡೆಯವರ ಹೆಸರಲ್ಲಿ 45,86,99,207 ರೂ. ಆಸ್ತಿಯಿದೆ. ಒಟ್ಟು 9,91,30,805 ರೂ. ಸಾಲವಿದೆ.
ಘೋಷಿತ ಆಸ್ತಿ ವಿವರಗಳಲ್ಲಿ ಚರಾಸ್ತಿ ಮೊತ್ತ 234,35,02,185 ರೂ ಇದೆ. ಸ್ಥಿರಾಸ್ತಿ 65,18,36,554 ರೂ. ಆರ್.ವಿ.ದೇಶಪಾಂಡೆ ಹಾಗೂ ರಾಧಾ ದೇಶಪಾಂಡೆ ಹೆಸರಿನಲ್ಲಿ ಇದೆ. ದೇಶಪಾಂಡೆಯವರ ಬಳಿ ನಗದು 7,61,949 ರೂ. ಅವರ ಪತ್ನಿ ರಾಧಾ ಬಳಿ ರೂ. 6,74,276 ಇದೆ. ಬ್ಯಾಂಕ್ ಖಾತೆಯಲ್ಲಿ 19,73,962, ಪತ್ನಿ ರಾಧಾ ದೇಶಪಾಂಡೆಯವರ ಹೆಸರಿಗೆ 17,92,700 ರೂ. ಇದೆ. ದೇಶಪಾಂಡೆಯವರ ಬಳಿ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮತ್ತು ಇತರೆ ಸೇರಿ 1,10,90,667 ರೂ., ಅವರ ಇನ್ನೂ ಪತ್ನಿ ರಾಧಾ ಬಳಿ 13,21,49,136 ರೂ. ಇದೆ. ದೇಶಪಾಂಡೆಯವರ ಬಳಿ 17,17,405 ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಪತ್ನಿ ಬಳಿ 4,73,67,542 ರೂ. ಮೌಲ್ಯದ ಚಿನ್ನಾಭರಣವಿದೆ. ಒಟ್ಟು ದೇಶಪಾಂಡೆ ಹೆಸರಿನಲ್ಲಿ 8,24,67,944 ರೂ. ಮತ್ತು ಅವರ ಪತ್ನಿ ರಾಧಾ ಹೆಸರಲ್ಲಿ ರೂ.1,66,62,861 ಸಾಲವಿದೆ.
ವಿ.ಎಸ್. ಪಾಟೀಲ್ ಆಸ್ತಿ 3.62 ಕೋಟಿ:ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ವಿ.ಎಸ್. ಪಾಟೀಲ್ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು, ಒಟ್ಟು ಆಸ್ತಿ 3.62 ಕೋಟಿ ಒಡೆಯರಾಗಿದ್ದಾರೆ. ಕೃಷಿ ಮೂಲದಿಂದ ತಮ್ಮ ವಾರ್ಷಿಕ ಆದಾಯ 31,50,818 ರೂ. ಇದ್ದು, ತಮ್ಮ ಕೈಯಲ್ಲಿ 60 ಸಾವಿರ, ಪತ್ನಿ ಶಶಿಕಲಾ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹಣವಿದೆ. ಕೆವಿಜಿ ಬ್ಯಾಂಕ್‌ನಲ್ಲಿ 44.133 ಲಕ್ಷ ರೂ. ಮುಂಡಗೋಡದ ಎಸ್‌ಬಿಐದಲ್ಲಿ 2.59 ರೂ. 1,64,904.66 ರೂ. ಕಲಕೇರಿ ಸೇವಾ ಸಹಕಾರಿ ಸಂಘದ ಶೇರು 32,000 ರೂಪಾಯಿಗಳಿದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಪತ್ನಿ ಶಶಿಕಲಾ ಅವರು, ಕೆವಿಜಿ ಬ್ಯಾಂಕ್ ಖಾತೆಯಲ್ಲಿ 2,08,659,64 ರೂ. ಇನ್ನೊಂದು ಖಾತೆಯಲ್ಲಿ 86,485.66 ರೂ. ಎಸ್‌ಬಿಐ ಖಾತೆಯಲ್ಲಿ 1,46,448.61 ರೂ. ಹಾಗೂ ಕಲಕೇರಿ ಸೇವಾ ಸಹಕಾರಿ ಸಂಘದಲ್ಲಿ 30 ಸಾವಿರ ರೂ. ಶೇರು ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಲದೊಂದಿಗೆ ರೂಪಾಲಿ ನಾಯ್ಕ ಆಸ್ತಿಯೂ ಡಬಲ್:ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿರುವ ಶಾಸಕಿ ರೂಪಾಲಿ ನಾಯ್ಕ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಚಿರಾಸ್ಥಿ 3.50 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಸಾಲ ಕೂಡ ಡಬಲ್ ಆಗಿದೆ.
2018ರರಲ್ಲಿ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಲಾಗಿದ್ದ ತಮ್ಮ ಆಸ್ತಿ ವಿವರದಲ್ಲಿ ಅಂಕೋಲಾದ ಹಿಲ್ಲೂರಿನಲ್ಲಿ 2 ಎಕರೆ ಕೃಷಿ ಭೂಮಿ, ಕಾರವಾರದ ದೇವಳಿವಾಡದಲ್ಲಿ ಎರಡು ವಾಸ್ತವ್ಯದ ಮನೆ ಹೊಂದಿರುವುದಾಗಿ ಒಟ್ಟು 1.03 ಕೋಟಿ ಸ್ಥಿರಾಸ್ತಿ ಇರುವ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಇದೀಗ ಪ್ರಸ್ತುತ ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಅಫಿಡವಿಟ್‌ನಲ್ಲಿ ನಗೆಕೋವೆ, ನಿವಳಿ, ಮೈಸೂರಿನ ವರುಣಾದಲ್ಲಿ ಒಟ್ಟು 32 ಎಕರೆ 36 ಗುಂಟೆ ಕೃಷಿ ಭೂಮಿ, ಒಂದು ವಾಣಿಜ್ಯ ಕಟ್ಟಡ, ದೇವಳಿವಾಡಾದಲ್ಲಿ 3 ಗುಂಟೆಯ ಕೃಷಿಯೇತರ ಜಾಗ ಇರುವುದಾಗಿ ತಿಳಿಸಿದ್ದಾರೆ.