ಕಾರವಾರ: ಮಾಜಾಳಿ ಬಳಿಯ ಅರಣ್ಯದಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಡಿನಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಮದ್ಯ ವಶಕ್ಕೆ!
ಗೋವಾದಲ್ಲಿ ಮದ್ಯದ ದರ ಕಡಿಮೆ ಇದೆ. ಅದನ್ನು ಅಕ್ರಮವಾಗಿ ಕಾರವಾರ ಮೂಲಕ ತಂದು ಕರ್ನಾಟಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ..
ಕಾಡಿನಲ್ಲಿ ಹುದುಗಿಸಿಟ್ಟಿದ್ದ ಬರೊಬ್ಬರಿ 6.70 ಲಕ್ಷ ಮೌಲ್ಯದ ಮದ್ಯ ವಶಕ್ಕೆ
ಗೋವಾ ರಾಜ್ಯದ ಪರವಾನಿಗೆ ಹೊಂದಿದ್ದ 1,423 ಲೀಟರ್ ಮದ್ಯ ಹಾಗೂ 228 ಲೀಟರ್ ಬಿಯರ್ನ ಕಾಡಿನಲ್ಲಿ ಅಡಗಿಸಿಡಲಾಗಿತ್ತು. ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋವಾದಲ್ಲಿ ಮದ್ಯದ ದರ ಕಡಿಮೆ ಇದೆ. ಅದನ್ನು ಅಕ್ರಮವಾಗಿ ಕಾರವಾರ ಮೂಲಕ ತಂದು ಕರ್ನಾಟಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.