ಕಾರವಾರ: ರಾಜ್ಯದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ದಾಂಡೇಲಿಯ ಸೂಪಾ ಜಲಾಶಯದ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಸೂಪಾ ಡ್ಯಾಂ ಬಳಿ ರಸ್ತೆ ಬಿರುಕು.. ಜಲಾಶಯದಿಂದ ನೀರು ಬಿಟ್ಟಿದ್ದಕ್ಕೆ ಈ ರೀತಿ ಆಯ್ತಾ? - ರಾಜ್ಯದ ಅತಿದೊಡ್ಡ ಅಣೆಕಟ್ಟು
ಸೂಪಾ ಜಲಾಶಯದ ಕೆಳಭಾಗದಲ್ಲಿರುವ ಸುಮಾರು 300 ಮೀಟರ್ ಡಾಂಬರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಸೂಪಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಸೂಪಾ ಜಲಾಶಯದ ಕೆಳಭಾಗದಲ್ಲಿರುವ ಸುಮಾರು 300 ಮೀಟರ್ ಡಾಂಬರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಸೂಪಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಇಂದು ಕೂಡ 57 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ನಿರಂತರವಾಗಿ ನೀರು ಬಿಡುತ್ತಿರುವ ಕಾರಣ ರಸ್ತೆ ಬಿರುಕು ಬಿಟ್ಟಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸೂಪಾ ಡ್ಯಾಂನ ಮುಖ್ಯ ಎಂಜಿನಿಯರ್ ಆರ್.ಟಿ.ಲಿಂಗಣ್ಣ, ಈ ರಸ್ತೆಗೂ, ಡ್ಯಾಂಗೂ ಯಾವುದೇ ಸಂಬಂಧ ಇಲ್ಲ. ಯಾರು ಕೂಡ ಜನರಲ್ಲಿ ಗೊಂದಲವನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ.