ಕಾರವಾರ: ಭಾರಿ ಗಾತ್ರದ ಹೆಬ್ಬಾವೊಂದು ತಾಲೂಕಿನ ಹಣಕೋಣ ಖಾರ್ಲ್ಯಾಂಡ್ನ ಹಳಗೆಜೂಗ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ರಾತ್ರಿ ಸಮಯದಲ್ಲಿ ಹಳಗೆಜೂಗ ರಸ್ತೆಯಲ್ಲಿ 12 ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅಷ್ಟೇ ಅಲ್ಲದೆ, ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.