ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಮಾಯವಾಗ್ತಿದ್ದ ಮಹಿಳೆಯರ ಬಟ್ಟೆ, ಚಪ್ಪಲಿ: ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಜನ್ರು! - ಕುಮಟಾ ಕ್ರೈಮ್​ ಸುದ್ದಿ

ರಾತ್ರಿಯಾಗುತ್ತಿದ್ದಂತೆ ಮಹಿಳೆಯರ ವೇಷ ಧರಿಸಿ ಓಡಾಡುವ ಯುವಕನೋರ್ವ ಮನೆಯ ಅಂಗಳದಲ್ಲಿ ಒಣಗಲು ಹಾಕುವ ಬಟ್ಟೆಗಳನ್ನು ಕದ್ದೊಯ್ಯುತ್ತಿದ್ದ. ಆದರೆ ಕೆಲವರಿಗೆ ಬಟ್ಟೆ ಏನಾಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ. ಈಗ ಸಿಸಿಟಿವಿಯಲ್ಲಿ ವಿಕೃತ ಮನಸ್ಸಿನ ವ್ಯಕ್ತಿಯ ಕಳ್ಳಾಟ ಬಯಲಾಗಿದೆ.

ಸಿಸಿಟಿವಿ ಬಿಚ್ಚಿಟ್ಟ ಶಾಕಿಂಗ್​ ಸತ್ಯ
ಸಿಸಿಟಿವಿ ಬಿಚ್ಚಿಟ್ಟ ಶಾಕಿಂಗ್​ ಸತ್ಯ

By

Published : Jul 29, 2020, 6:24 PM IST

ಕಾರವಾರ: ಮನೆಯ ಹೊರಗೆ ಒಣಗಲು ಹಾಕಿದ್ದ ಹೆಣ್ಣುಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ರಾತ್ರಿ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದವು. ಈ ಕುರಿತು ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯ ಕೈಚಳಕ ಕಣ್ಣಿಗೆ ಬಿದ್ದಿದೆ.

ಆದರೆ ಮುಂದಿನ ವಿಡಿಯೋಗಳನ್ನು ಪರಿಶೀಲಿಸಿದ ಮನೆಯವರಿಗೆ ಆಘಾತ ಕಾದಿತ್ತು. ಕಾರಣ ಸ್ಕರ್ಟ್ ಧರಿಸಿ ಬಂದವಳು ಮಹಿಳೆಯಲ್ಲ, ಆತ ಓರ್ವ ಸೈಕೋ. ಇಂತಹದೊಂದು ಘಟನೆ ಬೆಳಕಿಗೆ‌ ಬಂದಿರುವುದು ಕುಮಟಾ ಪಟ್ಟಣದ ಮಣಕಿ ಬಳಿ.

ಸಿಸಿಟಿವಿ ಬಿಚ್ಚಿಟ್ಟ ಶಾಕಿಂಗ್​ ಸತ್ಯ

ರಾತ್ರಿಯಾಗುತ್ತಿದ್ದಂತೆ ಮಹಿಳೆಯರ ವೇಷ ಧರಿಸಿ ಓಡಾಡುವ ಯುವಕ ಮನೆಯ ಅಂಗಳದಲ್ಲಿ ಒಣಗಲು ಹಾಕುವ ಬಟ್ಟೆಗಳನ್ನು ಕದ್ದೊಯ್ಯುತ್ತಿದ್ದ. ಆದರೆ ಕೆಲವರಿಗೆ ಬಟ್ಟೆ ಏನಾಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ. ಜು. 22 ರಂದು ಮಣಕಿ ಬಳಿಯ ರಾಮಚಂದ್ರ ಹೆಗಡೆ ಎಂಬುವರ ಮನೆಗೆ ಸ್ಕರ್ಟ್ ಧರಿಸಿ ರಾತ್ರಿ 2.13 ರ ಹೊತ್ತಿಗೆ ಬಂದಿದ್ದ ಈತ, ಮನೆಯ ಎದುರಿಗಿದ್ದ ಹೆಣ್ಣುಮಕ್ಕಳ ಬಟ್ಟೆಗಳನ್ನು ಎಳೆದುಕೊಂಡು ಮೈಮೇಲೆ ಹಾಕಿಕೊಂಡಿದ್ದ. ಮನೆ ಬಾಗಿಲ ಬಳಿ ಇದ್ದ ಚಪ್ಪಲಿಗಳನ್ನು ಎತ್ತಿಕೊಂಡಿದ್ದ.

ಈತನ ಚಲನವಲನಗಳು ಮನೆಯ ಹಾಗೂ ಪಕ್ಕದ ಹಿರೋ ಶೋ ರೂಮ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸುತ್ತಮುತ್ತಲಿನ ಪ್ರದೇಶದ ಕೆಲ ಮನೆಗಳಲ್ಲಿಯೂ ಹೀಗೆ ಬಟ್ಟೆ, ಚಪ್ಪಲಿಗಳು ಕಾಣಿಯಾಗುತ್ತಿದ್ದವು. ಆದರೆ ಏನಾಯಿತು ಎಂಬುದು ಗೊತ್ತಾಗುತ್ತಿರಲಿಲ್ಲ. ಇದೀಗ ಈ ವಿಚಿತ್ರ ಕಳ್ಳನ ವಿಕೃತಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಕೂಡಲೇ ಸೈಕೋನನ್ನು ಪತ್ತೆಹಚ್ಚಿ ಬಂಧಿಸುವಂತೆ ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ABOUT THE AUTHOR

...view details