ಕಾರವಾರ/ಭಟ್ಕಳ: ಕಾರವಾರ ಹಾಗೂ ಭಟ್ಕಳದಲ್ಲಿ 100ರ ಗಡಿ ದಾಟಿದ ವೃದ್ಧೆಯರಿಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಾರವಾರ, ಭಟ್ಕಳದಲ್ಲಿ 100ರ ಗಡಿ ದಾಟಿದ ಶತಾಯುಷಿಗಳಿಂದ ಮತ ಚಲಾವಣೆ - old age womens in Bhatkal and karwar
101 ವರ್ಷದ ಲಕ್ಷ್ಮಿ ವೆಂಕಣ್ಣ ನಾಯ್ಕನ ಹಾಗೂ 103 ವಯಸ್ಸಿನ ದುರ್ಗಮ್ಮ ಜಟ್ಟಪ್ಪ ನಾಯ್ಕ ಎಂಬ ಶತಾಯುಷಿ ವೃದ್ಧೆಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಮನೆಯಲ್ಲಿಯೇ ಸಬೂಬು ಉಳಿದುಕೊಂಡಿದ್ದವರು ನಾಚುವಂತೆ ಮಾಡಿದ್ದಾರೆ.
101 ವರ್ಷದ ಲಕ್ಷ್ಮಿ ವೆಂಕಣ್ಣ ನಾಯ್ಕ, ಕಾರವಾರದ ಹಿಲ್ಲೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಚಲಾಯಿಸಿದ ಶತಾಯುಷಿ ವೃದ್ಧೆ. ಈಕೆ ಮಂಗಳವಾರ ತಮ್ಮ ಕುಟುಂಬದ ಜೊತೆ ಆಗಮಿಸಿ ಹಿಲ್ಲೂರು ಗ್ರಾಮದ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತದಾನ ಎಂಬುದು ಅಮೂಲ್ಯವಾದದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯನ್ನು ನಾನು ಮರೆಯುವುದಿಲ್ಲ ಎಂದು ವೃದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ದುರ್ಗಮ್ಮ ಜಟ್ಟಪ್ಪ ನಾಯ್ಕ ಎಂಬ 103 ವಯಸ್ಸಿನ ವೃದ್ಧೆ ಗ್ರಾ.ಪಂ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಇಳಿ ವಯಸ್ಸಿನಲ್ಲೂ ಚಲಾಯಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಮತದಾನ ಮಾಡಿರುವುದರಿಂದ ಗ್ರಾಮಸ್ಥರು ಅಜ್ಜಿ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತದಾನ ಮಾಡದೇ ಮನೆಯಲ್ಲಿಯೇ ಸಬೂಬು ಉಳಿದುಕೊಂಡಿದ್ದವರು ನಾಚುವಂತೆ ಮಾಡಿದ್ದಾರೆ.