ಕರ್ನಾಟಕ

karnataka

ETV Bharat / state

ಜೂಜಾಡುತ್ತಿದ್ದವರು ಸೆರೆ: ಬಂಧಿತ ಆರೋಪಿಗಳಿಗೆ ಹೋಮ್ ಕ್ವಾರಂಟೈನ್ ಸೀಲ್

ಲಾಕ್ ಡೌನ್ ಉಲ್ಲಂಘಿಸಿ ಜೂಜಾಡುತ್ತಿರುವವರನ್ನು ಬಂಧಿಸಿರುವ ಪೊಲೀಸರು ಕ್ವಾರಂಟೈನ್​ ಸೀಲ್​ ಹಾಕಿದ್ದಾರೆ.

gambling
gambling

By

Published : Apr 18, 2020, 8:27 AM IST

ಭಟ್ಕಳ:ಲಾಕ್​ಡೌನ್​ ನಡುವೆಯೂಕಟ್ಟಿಕೊಂಡು ಅಂದರ್-ಬಾಹರ್ ಅಡುತ್ತಿರುವವರ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ 6 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನ ಸೋನಾರಕೇರಿಯಲ್ಲಿ ನಡೆದಿದೆ.

ಆರೋಪಿಗಳಾದ ವಿಶ್ವನಾಥ ಸೇಠ್​, ಹೃತಿಕ್ ಸೇಠ್​, ರಮಾನಂದ ಸೇಠ್​, ಮಾರುತಿ ಸೇಠ್​, ವೆಂಕಟೇಶ ಸೇಠ್​, ಜನಾರ್ಧನ ಸೇಠ್​ ಇವರೆಲ್ಲರೂ ಕೊರೊನಾ ಕರ್ಫ್ಯೂ (ಲಾಕ್ ಡೌನ್) ಇದ್ದರೂ ಸಹ ಮಾಸ್ಕ್ ಹಾಕದೇ, ಜೂಜಾಡುತ್ತಿರುವಾಗಿ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಬಗ್ಗೆ ನಗರ ಠಾಣೆಯ ಪಿ.ಎಸ್.ಐ, ಎಚ್. ಬಿ. ಕುಡಗುಂಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಸೀಲ್ ಹಾಕಲಾಯಿತು.

ABOUT THE AUTHOR

...view details