ಭಟ್ಕಳ:ತಾಲೂಕಿನಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆಯಾಗುವುದಕ್ಕೆ ಇಂದು ಬ್ರೇಕ್ ಬಿದ್ದಿದೆ. ಹೌದು, ತಾಲೂಕಿನಲ್ಲಿಂದು ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ.
ಭಟ್ಕಳದಲ್ಲಿಂದು ಒಂದೂ ಕೊರೊನಾ ಪ್ರಕರಣಗಳಿಲ್ಲ: ನಿಟ್ಟುಸಿರು ಬಿಟ್ಟ ಜನತೆ - ಭಟ್ಕಳ ಕೊರೊನಾ ಪ್ರಕರಣ
ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖಗೊಂಡಿದ್ದು, ನಿನ್ನೆ ಒಂದು ಪ್ರಕರಣ ಹಾಗೂ ಇಂದು ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
Bhatkala corona case
ಭಟ್ಕಳದ ಜನತೆ ಒಂದು ವಾರದಿಂದ ತಾಲೂಕಿನಲ್ಲಿ ಹೆಚ್ಚುತ್ತಿದ್ದ ಕೊರೊನಾ ಸೋಂಕಿಗೆ ಆತಂಕಗೊಂಡಿದ್ದರು. ಮನೆಯಿಂದ ಹೊರಗೆ ಬರಲು ಮೂರ್ನಾಲ್ಕು ಬಾರಿ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದ್ರೆ ಸದ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖಗೊಂಡಿದ್ದು, ನಿನ್ನೆ ಒಂದು ಪ್ರಕರಣ ಹಾಗೂ ಇಂದು ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇಂದಿನ ಮಟ್ಟಿಗೆ ತಾಲೂಕಿನ ಜನರಲ್ಲಿ ನೆಮ್ಮದಿಯ ವಾತಾವರಣ ಇದೆ.