ಭಟ್ಕಳ :ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೂತನ ಎಎಸ್ಪಿಯಾಗಿ ಐಪಿಎಸ್ ಅಧಿಕಾರಿ ನಿಖಿಲ್ ಬುಳ್ಳಾವರ ಅಧಿಕಾರ ಸ್ವೀಕರಿಸಿದ್ದಾರೆ.
ಡಿವೈಎಸ್ಪಿ ವೆಲೈಂಟೈನ್ ಡಿಸೋಜಾ ಅವರನ್ನು ಮಂಗಳೂರು ಐ.ಜಿ.ಪಿ. ಕಚೇರಿಗೆ ವರ್ಗಾವಣೆಗೊಳಿಸಿದ್ದು ನಿಖಿಲ್ ಬುಳ್ಳಾವರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಚಿತ್ರದುರ್ಗ ಮೂಲದ ನಿಖಿಲ್ ಬುಳ್ಳಾವರ ಅವರು ತರಬೇತಿ ಮುಗಿಸಿದ ಬಳಿಕ ರಾಯಚೂರಿನಲ್ಲಿ ಪ್ರೊಬೆಶನರಿ ಎಎಸ್ಪಿಯಾಗಿ ಸೇವೆಗೆ ಸೇರಿದ್ದರು.
ಲೋಕಸಭಾ ಚುನಾವಣಾ ನಿಮಿತ್ತ ಬಂದೋಬಸ್ತಗೆ ಕೊಪ್ಪರ ಗ್ರಾಮದ ಮತಗಟ್ಟೆ ತೆರಳಿದ್ದ ಇವರು ಮಕ್ಕಳೊಂದಿಗೆ ಬಿಸಿಯೂಟ ಸವಿದು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಸರಳತೆಯನ್ನು ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ತಮ್ಮ ವಿಭಾಗದ ಎಲ್ಲಾ ಠಾಣೆಗೆ ತೆರಳಿ ಪೊಲೀಸರ ಕಾರ್ಯವೈಖರಿಯನ್ನು ಪರಿಶೀಲಿಸಿದ್ದಾರೆ.