ಕರ್ನಾಟಕ

karnataka

ETV Bharat / state

20 ಸಾವಿರದಿಂದ 18 ಕೋಟಿಯ ಪಯಣ.. ಇದು ಶಿರಸಿಯ ಕೃಷಿಕನ ಯಶೋಗಾಥೆ!

ಕರ್ನಾಟಕದ ಕೃಷಿಕರೋರ್ವರ ಯಶೋಗಾಥೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್​​ನಲ್ಲಿ ಶಿರಶಿಯ ಜೇನುಕೃಷಿಕ ಮಧುಕೇಶ್ವರ ಹೆಗಡೆ ಅವರ ಸಾಧನೆ ಕುರಿತು ಶ್ಲಾಘಿಸಿದ್ದಾರೆ.

ಶಿರಸಿಯ ಜೇನುಕೃಷಿಕನ ಶಾಧನೆ ಶ್ಲಾಘಿಸಿದ ಮೋದಿ
ಶಿರಸಿಯ ಜೇನುಕೃಷಿಕನ ಶಾಧನೆ ಶ್ಲಾಘಿಸಿದ ಮೋದಿ

By

Published : Aug 4, 2022, 4:13 PM IST

Updated : Aug 5, 2022, 11:23 AM IST

ಶಿರಸಿ: 20 ಸಾವಿರ ರೂ. ಸಾಲ ಮಾಡಿ ಆರಂಭಿಸಿದ ಜೇನು ಕೃಷಿಯಿಂದ 18 ಕೋಟಿ ರೂ. ಆದಾಯ ಸಂಪಾದಿಸಿದ ಶಿರಸಿಯ ಕೃಷಿಕರೋರ್ವರ ಯಶೋಗಾಥೆ ಈಗ ದೇಶಕ್ಕೆ ಪರಿಚಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್​​ನಲ್ಲಿ ಜೇನುಕೃಷಿಕನ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಇದೀಗ ಇವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.

ಮೋದಿಯಿಂದ ಶ್ಲಾಘನೆ: ಪ್ರಧಾನಿ ನರೇಂದ್ರ ಮೋದಿ ಕಳೆದ ಭಾನುವಾರ ನಡೆಸಿದ 91ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ. ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ, ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.

50 ಜೇನು ಕಾಲೊನಿಗೆ ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ, ಈಗ 800 ಜೇನು ಕಾಲೊನಿ ಪೋಷಿಸುತ್ತಿದ್ದಾರೆ. ಹಲವಾರು ಟನ್ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ ಸೇರಿದಂತೆ ವನಸ್ಪತಿ ಜೇನು ತುಪ್ಪಗಳನ್ನೂ ಉತ್ಪಾದಿಸುವುದು ವಿಶೇಷವೆನಿಸಿದೆ. ಇವರ ಜೇನು ಕೃಷಿಯ ಸಾಧನೆ ಮತ್ತು ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ ಎಂದು ಮೋದಿ ಬಣ್ಣಿಸಿದರು.

‘ಜೇನುಕೃಷಿ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಮೋದಿಯವರಂತಹ ಪ್ರಧಾನಿ ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು’ ಎಂದು ಹೆಗಡೆ ಸಂತಸ ವ್ಯಕ್ತಪಡಿಸಿದರು.

ಶಿರಸಿಯ ಜೇನುಕೃಷಿಕನ ಸಾಧನೆ ಶ್ಲಾಘಿಸಿದ ಮೋದಿ.. ರೈತನಿಗೆ ಸಂತಸ

35 ವರ್ಷದ ಶ್ರಮ: ಮಧುಕೇಶ್ವರ ಹೆಗಡೆ ಅವರು ಕಳೆದ 35 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ವಾರ್ಷಿಕ 1500ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೇನು ಬೆಳೆಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ವನಸ್ಪತಿ ಗಿಡಗಳನ್ನೂ ಮನೆ ಸುತ್ತಮುತ್ತ ಬೆಳೆಸುತ್ತಿರುವುದು ವಿಶೇಷವಾಗಿದೆ. 2009-10 ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ 3 ಲಕ್ಷ ಸಹಾಯಧನ ನೀಡಿ, 50 ಜೇನು ಪೆಟ್ಟಿಗೆ ನೀಡಲಾಗಿತ್ತು. ನಂತರ ಅದನ್ನು ಅಭಿವೃದ್ಧಿ ಮಾಡಿ ಅವರು ಬೆಳೆದಿದ್ದಾರೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.

ಪ್ರಧಾನಿ ಮೋದಿ ಅವರು ಉತ್ತರ ಕನ್ನಡದ ಬಾಳೆಕಾಯಿ ಪ್ರೊಡಕ್ಟ್ ಬಗ್ಗೆ ಹಿಂದೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು. ಈಗ ಜೇನುಕೃಷಿಕರ ಯಶೋಗಾಥೆಯ ಬಗ್ಗೆ ಹೇಳಿದ್ದು, ಇದು ಉತ್ತರ ಕನ್ನಡ ಜಿಲ್ಲೆ ದೇಶ ಮಟ್ಟದಲ್ಲಿ ಪ್ರಸಿದ್ಧಿಯಾಗುವಂತೆ ಮಾಡಿದೆ.

ಇದನ್ನೂ ಓದಿ:ಮೋದಿ ದೂರದೃಷ್ಟಿ ನಾಯಕ, ಅಮಿತ್ ಶಾ ದಕ್ಷ ನಾಯಕ: ಸಿಎಂ ಬೊಮ್ಮಾಯಿ‌ ಬಣ್ಣನೆ

Last Updated : Aug 5, 2022, 11:23 AM IST

ABOUT THE AUTHOR

...view details