ಕಾರವಾರ(ಉತ್ತರ ಕನ್ನಡ):ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ವ್ಯಕ್ತಿ ಕುಡ್ಲೆ ಬೀಚ್ನಲ್ಲಿ ಶವವಾಗಿ ಪತ್ತೆ - ಗೋಕರ್ಣ ಪೊಲೀಸ್ ಠಾಣೆ
ಕೇರಳದಿಂದ ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪತ್ತೆಯಾಗಿದೆ.
ಕೇರಳ ಮೂಲದ ವಿಶ್ವನಾಥ್ ಮೋಹನದಾಸ್ (28) ಮೃತ ವ್ಯಕ್ತಿ. ವಿಶ್ವನಾಥ್ ಮೋಹನದಾಸ್ ಕಳೆದ ನಾಲ್ಕು ದಿನಗಳ ಹಿಂದೆ ಮೂವರು ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಆಗಮಿಸಿದ್ದು, ಎಲ್ಲರೂ ಖಾಸಗಿ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದರು. ಆದರೆ ವಿಶ್ವನಾಥ್ ಬುಧವಾರ ರಾತ್ರಿ ವೇಳೆ ಬೀಚ್ಗೆ ಇಳಿದಿದ್ದಾನೆ. ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆತನ ಸ್ನೇಹಿತರು ತಿಳಿಸಿದ್ದರು.
ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಆತನ ಶವ ಪತ್ತೆಯಾಗಿದ್ದು, ಶವದ ಮರಣೋತ್ತರ ಪರೀಕ್ಷೆ ನಡೆಸಿ ಕೇರಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ನವೀನ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.